Thursday, May 16, 2024
Homeಕರಾವಳಿವಿಧಾನಸಭಾ ಚುನಾವಣೆಯ ಟ್ಯಾಕ್ಸಿ ಚಾಲಕರ ಬಾಡಿಗೆಯೇ ಇನ್ನೂ ಪಾವತಿಯಾಗಿಲ್ಲ!

ವಿಧಾನಸಭಾ ಚುನಾವಣೆಯ ಟ್ಯಾಕ್ಸಿ ಚಾಲಕರ ಬಾಡಿಗೆಯೇ ಇನ್ನೂ ಪಾವತಿಯಾಗಿಲ್ಲ!

spot_img
- Advertisement -
- Advertisement -

ಮಂಗಳೂರು: ವಿಧಾನಸಭಾ ಚುನಾವಣೆಯಾಗಿ 10 ತಿಂಗಳು ಕಳೆದರೂ ಅಂದು ಚುನಾವಣಾಧಿಕಾರಿಗಳು ಓಡಾಟಕ್ಕೆ ಬಳಸಿದ ಟ್ಯಾಕ್ಸಿಗಳಿಗೆ ಇನ್ನೂ ಬಾಡಿಗೆಯನ್ನು ಚುನಾವಣಾ ಆಯೋಗವಾಗಲೀ, ಜಿಲ್ಲಾಡಳಿತ ವಾಗಲೀ, ಸಂಬಂಧಿತ ಸರಕಾರಿ ಇಲಾಖೆಯಾಗಲೀ ಪಾವತಿಸಿಲ್ಲ. ಆದರೆ ಮತ್ತೂಂದು ಚುನಾವಣೆ ಬಂದಿದೆ! ಎಂದು ಚಾಲಕರು ದೂರಿದ್ದಾರೆ.

ಚುನಾವಣೆ ಕಾರ್ಯಕ್ಕೆ ಆಯೋಗ, ಜಿಲ್ಲಾಡಳಿತವು ಸ್ಥಳೀಯ ಖಾಸಗಿ ಟ್ಯಾಕ್ಸಿಗಳನ್ನು ಪ್ರತಿ ವರ್ಷವೂ ಬಳಸಿಕೊಳ್ಳುತ್ತದೆ. ಆದರೆ ಸಕಾಲದಲ್ಲಿ ಬಾಡಿಗೆ ಪಾವತಿಸುವುದೇ ಇಲ್ಲ. ಗ್ರಾಮೀಣ ಭಾಗಕ್ಕೆ ಬಳಕೆಯಾಗಿರುವ ವಾಹನಗಳ ಮಾಲಿಕರಿಗೆ ಈ ಸಮಸ್ಯೆ ಇನ್ನೂ ಅಧಿಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಳಸಲಾದ ಟ್ಯಾಕ್ಸಿಗಳ ಪೈಕಿ ಶೇ. 40 ರಷ್ಟು ವಾಹನಗಳ ಮಾಲಕರಿಗೆ ಇನ್ನೂ ಬಾಡಿಗೆ ಪಾವತಿಯಾಗಿಲ್ಲ.

ಚುನಾವಣೆ ಮುಗಿದು 10 ತಿಂಗಳಾದರೂ ಹಣಕ್ಕಾಗಿ ಚಾಲಕರು ಆರ್‌ಟಿಒ, ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರ ಕಚೇರಿ ಎಂದೆಲ್ಲ ಅಲೆದಾಡಬೇಕು ಎಂಬುದು ಚಾಲಕರ ದೂರು.

ಬಲವಂತವಾಗಿ ಬಳಕೆ; ಚುನಾವಣೆ ಘೋಷಣೆಯಾದ ಬಳಿಕ ವಿವಿಧ ಭಾಗದಿಂದ ಅಧಿಕಾರಿಗಳು ಆಗಮಿಸುತ್ತಾರೆ. ಜಿಲ್ಲಾಡಳಿತ ಟ್ಯಾಕ್ಸಿಗಳನ್ನು ಬಲವಂತವಾಗಿ ಪಡೆಯುತ್ತಾರೆ.ವಾಹನದಲ್ಲಿ ಪ್ರಯಾಣಿಕರಿದ್ದಲ್ಲಿ ಅರ್ಧದಲ್ಲೇ ಇಳಿಸಬೇಕಾದ ಅನಿವಾರ್ಯವೂ ಇದೆ. ಕರ್ತವ್ಯದ ನೆಪದಲ್ಲಿ ನಮ್ಮ ವಾಹನಗಳನ್ನು ದುರ್ಬಳಕೆ ಮಾಡಿಕೊಂಡು ಪ್ರವಾಸಕ್ಕೆ ತೆರಳುವ ಅಧಿಕಾರಿಗಳೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಅಸಹಾಯಕ ಚಾಲಕರು.

ಕೂಡಲೇ ಪಾವತಿಸಿ; ಹಾಗಾಗಿ ಮೊದಲೇ ಲಿಖೀತವಾಗಿ ವ್ಯವಹಾರ ನಡೆಸಿ ಚುನಾವಣೆಯ ಬಳಿಕ 24 ಗಂಟೆಯೊಳಗೆ ಹಣ ಪಾವತಿಸಿದಲ್ಲಿ ಪ್ರಯೋಜನವಾಗಲಿದೆ. ಇದರೊಂದಿಗೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ ಟ್ಯಾಕ್ಸಿ ಚಾಲಕರು.

- Advertisement -
spot_img

Latest News

error: Content is protected !!