Saturday, June 27, 2026
Homeಕರಾವಳಿಧರ್ಮಸ್ಥಳದಲ್ಲಿ ಮೊದಲ ಪಾಯಿಂಟ್ ನಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ನ‌ ರಹಸ್ಯ ಬಯಲು

ಧರ್ಮಸ್ಥಳದಲ್ಲಿ ಮೊದಲ ಪಾಯಿಂಟ್ ನಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ನ‌ ರಹಸ್ಯ ಬಯಲು

- Advertisement -
- Advertisement -

ಧರ್ಮಸ್ಥಳದಲ್ಲಿ ಜುಲೈ 29 ರಂದು ನಡೆದ ಕಾರ್ಯಾಚರಣೆ ವೇಳೆ ಮೊದಲ ಪಾಯಿಂಟ್ ನಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ನ‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ನ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆಯ

ಜುಲೈ 29 ರಂದು ಮೊದಲ ಪಾಯಿಂಟ್ ನಲ್ಲಿ ಡೆಬಿಟ್ ಕಾರ್ಡ್ ಹಾಗೂ  ಪಾನ್ ಕಾರ್ಡ್ ಪತ್ತೆಯಾಗಿತ್ತು. ಅಲ್ಲಿ ಸಿಕ್ಕ ಪಾನ್ ಕಾರ್ಡ್ ನ ವಾರಿಸುದಾರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಾಗೇ ಅಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಎಂದು ಮಾಹಿತಿ ಲಭ್ಯವಾಗಿದೆ.

ಆ ಮಹಿಳೆ ಇನ್ನೂ ಜೀವಂತವಾಗಿದ್ದು, ಆ ಮಹಿಳೆಯನ್ನ ಎಸ್ ಐ ಟಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಯನ್ನು ಎಸ್ ಐ ಟಿ ಖಚಿತ ಪಡಿಸಿದೆ. ಇದೆ ಡೆಬಿಟ್ ಕಾರ್ಡ್ ಹಾಗು ಪಾನ್ ಕಾರ್ಡ್ ಕುರಿತು ಅನೇಕ ಊಹಾ ಪೋಹ ಸೃಷ್ಟಿಯಾಗಿತ್ತು. ಇದೀಗ ಸದ್ಯ ಎಲ್ಲ ಉಹಾಪೋಹಗಳಿಗೆ ಎಸ್ ಐ ಟಿ ತೆರೆ ಎಳೆದಿದೆ.

- Advertisement -

Latest News

error: Content is protected !!