- Advertisement -


- Advertisement -
ಮಂಗಳೂರು: ದಕ್ಷಿಣ ಕನ್ನಡ ಅಮೆಚೂರ್ ಕುಸ್ತಿ ಸಂಘ ಮಂಗಳೂರು ವತಿಯಿಂದ 49ನೇ ವರ್ಷದ ಜಿಲ್ಲೆಯ ಪ್ರತಿಷ್ಠಿತ ತುಳುನಾಡ ಕುಮಾರ – ತುಳುನಾಡ ಕೇಸರಿ ಕುಸ್ತಿ ಪಂದ್ಯಾಟವನ್ನ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವು ಯೆನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ ಒಳಾಂಗಣ ಕ್ರೀಡಾಂಗಣದಲ್ ಡಿ. 21 ಭಾನುವಾರದಂದು ನಡೆಯಿತು.
ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಹೆಚ್ಚು ವ್ಯಾಯಾಮ ಶಾಲೆಯ 300ಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸಿದ್ದು, ತುಳುನಾಡ ಕುಮಾರ 61 ಕೆಜಿ ವಿಭಾಗದಲ್ಲಿ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ಇದರ ಕುಸ್ತಿಪಟು ನಶಾಲ್ ಅಹ್ಮದ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು.
- Advertisement -


