Thursday, May 2, 2024
Homeಕರಾವಳಿನೆಲ್ಯಾಡಿ: ವಿಷಕಾರಿ ಹಾವು ಕಡಿದು ಗ್ರಾ.ಪಂ.ಮಾಜಿ ಸದಸ್ಯೆ ಸಾವು !

ನೆಲ್ಯಾಡಿ: ವಿಷಕಾರಿ ಹಾವು ಕಡಿದು ಗ್ರಾ.ಪಂ.ಮಾಜಿ ಸದಸ್ಯೆ ಸಾವು !

spot_img
- Advertisement -
- Advertisement -

ನೆಲ್ಯಾಡಿ : ಕೊಣಾಲು ಗ್ರಾಮದಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದು ಗ್ರಾ.ಪಂ.ಮಾಜಿ ಸದಸ್ಯೆ ಮೃತಪಟ್ಟ ಘಟನೆ ನಡೆದಿದೆ.

ಕೊಣಾಲು ಗ್ರಾಮದ ಆರ್ಲ ನಿವಾಸಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯೆ ರೋಸಮ್ಮ ಪಿ.ಡಿ.ಯಾನೆ ವಲ್ಸಮ್ಮ ( 52 ) ಮೃತಪಟ್ಟ ದುರ್ದೈವಿ.

ರೋಸಮ್ಮ ರಾತ್ರಿ ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ಅವರಿಗೆ ವಿಷಕಾರಿ ಹಾವು ಕಡಿದಿದೆ. ತಕ್ಷಣ ರೋಸಮ್ಮರವರು ಅಲ್ಲಿಂದ ಪಕ್ಕದ ಮನೆಗೆ ಬಂದಿದ್ದು ಅಲ್ಲಿ ಕುಸಿದು ಬಿದ್ದರು.

ಕೂಡಲೇ ಅವರನ್ನು ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ .

- Advertisement -
spot_img

Latest News

error: Content is protected !!