Tuesday, April 30, 2024
Homeತಾಜಾ ಸುದ್ದಿಜಯಚಾಮರಾಜೇಂದ್ರ ಒಡೆಯರ್‌ರೊಂದಿಗಿದ್ದ ಫೋಟೋ ಕಾಣೆಯಾಗಿದೆ: ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ: ಹೆಚ್‌.ಡಿ.ದೇವೇಗೌಡ ಮನವಿ

ಜಯಚಾಮರಾಜೇಂದ್ರ ಒಡೆಯರ್‌ರೊಂದಿಗಿದ್ದ ಫೋಟೋ ಕಾಣೆಯಾಗಿದೆ: ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ: ಹೆಚ್‌.ಡಿ.ದೇವೇಗೌಡ ಮನವಿ

spot_img
- Advertisement -
- Advertisement -

ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಹೊಳೆನರಸೀಪುರ ಪ್ರವಾಸಿ ಮಂದಿರದಲ್ಲಿ ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೊ ಕಾಣೆಯಾಗಿದೆ. ಆ ಫೋಟೋ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ. ಪ್ರಿಂಟ್ ಹಾಕಿಸಿ ವಾಪಸ್ ಕೊಡುತ್ತೇನೆ ಎಂದು ದೇವೇಗೌಡರು ಮನವಿ ಮಾಡಿದ್ದಾರೆ.

ಆ ಫೋಟೊ ನನ್ನ ಪಾಲಿಗೆ ಅಮೂಲ್ಯ ಮತ್ತು ಅವಿಸ್ಮರಣೀಯ. ಅದು ಯಾರ ಬಳಿಯೇ ಇದ್ದರೂ ದಯವಿಟ್ಟೂ ಹಿಂದಿರುಗಿಸಿ. ಪ್ರಿಂಟ್ ಹಾಕಿಸಿ ನಿಮಗೇ ವಾಪಸ್ ಕೊಡುತ್ತೇನೆ. ನಾನು ಶಾಸಕನಾಗಿದ್ದಾಗ ಒಡೆಯರ್ ಅವರೊಂದಿಗೆ ಮುಂಜಾನೆಯ ಉಪಹಾರ ಸೇವಿಸಿದ್ದೆ. ಈ ಸಂದರ್ಭ ಅವಿಸ್ಮರಣೀಯ ಫೋಟೊ ತೆಗೆಯಲಾಗಿತ್ತು. ಆದರೆ ಮನೆ ಬದಲಿಸುವಾಗ ಫೋಟೊ ನಾಪತ್ತೆಯಾಗಿದೆ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!