Wednesday, June 3, 2026
Homeತಾಜಾ ಸುದ್ದಿಕಾಂತಾರ ಯಶಸ್ಸಿನ ಬೆನ್ನಲ್ಲೇ ರಿಷಬ್‌ ಶೆಟ್ಟಿಗೆ ಹೊಸ ಬಿರುದು: ಡಿವೈನ್‌ ಸ್ಟಾರ್‌ ಎಂದ ಅಭಿಮಾನಿಗಳು

ಕಾಂತಾರ ಯಶಸ್ಸಿನ ಬೆನ್ನಲ್ಲೇ ರಿಷಬ್‌ ಶೆಟ್ಟಿಗೆ ಹೊಸ ಬಿರುದು: ಡಿವೈನ್‌ ಸ್ಟಾರ್‌ ಎಂದ ಅಭಿಮಾನಿಗಳು

- Advertisement -
- Advertisement -

ಕಾಂತಾರ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ಹೊಸದೊಂದು ಬಿರುದು ಕೊಡಲು ಮುಂದಾಗಿದ್ದಾರೆ.

ರಿಯಲ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಸೂಪರ್ ಸ್ಟಾರ್ ಹೀಗೆ ತಮ್ಮ ನೆಚ್ಚಿನ ಕಲಾವಿದರಿಗೆ ಅಭಿಮಾನಿಗಳು ಬಿರುದು ಕೊಟ್ಟು ಅಭಿಮಾನ ತೋರಿದ್ದಾರೆ. ರಿಷಬ್ ಶೆಟ್ಟಿ ಅವರಿಗೂ ಕೂಡ ಸದ್ಯ ‘ಡಿವೈನ್ ಸ್ಟಾರ್’ (Divine Star) ಎಂದು ಬಿರುದು ಕೊಟ್ಟಿದ್ದು, ಅನೇಕರು ಇದೇ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ ನೋಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ‘ಡಿವೈನ್’ ಶಬ್ದವನ್ನು ಬಳಸಿಯೇ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಅಭಿಮಾನಿಗಳು ಇನ್ಮುಂದೆ ‘ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ’ ಎಂದು ಕರೆಯಲು ನಿರ್ಧರಿಸಿರುವ ಕುರಿತು ಚರ್ಚೆ ಆಗುತ್ತಿದೆ

- Advertisement -

Latest News

error: Content is protected !!