Wednesday, June 24, 2026
Homeಕರಾವಳಿಉಡುಪಿಮಲ್ಪೆ: ಕೋಸ್ಟ್ ಗಾರ್ಡ್ ಬೋಟ್ ಚಲಿಸಿ ಸಂಪೂರ್ಣ ಹಾನಿಗೀಡಾದ ಬಲೆ: 8 ಲಕ್ಷಕ್ಕೂ ಅಧಿಕ ನಷ್ಟ

ಮಲ್ಪೆ: ಕೋಸ್ಟ್ ಗಾರ್ಡ್ ಬೋಟ್ ಚಲಿಸಿ ಸಂಪೂರ್ಣ ಹಾನಿಗೀಡಾದ ಬಲೆ: 8 ಲಕ್ಷಕ್ಕೂ ಅಧಿಕ ನಷ್ಟ

- Advertisement -
- Advertisement -

ಮಲ್ಪೆ: ಮೀನು ಬೇಟೆಗಾಗಿ ಸಮುದ್ರದ ಮಧ್ಯೆ ಹಾಕಲಾಗಿದ್ದ ಬಲೆ ಕೋಸ್ಟ್‌ ಗಾರ್ಡ್‌ ಬೋಟ್‌ಗೆ ಸಿಲುಕಿ ಲಕ್ಷಾಂತರ ರೂ. ಹಾನಿಗೀಡಾದ ಘಟನೆ ಮಲ್ಪೆ ಬಂದರಿನ ಸಮೀಪ ನಡೆದಿದೆ. ಬಲೆಯ ಮೇಲೆ ಭಾರತೀಯ ಕೋಸ್ಟ್‌ಗಾರ್ಡ್‌ ಬೋಟ್‌ ಸಂಚರಿಸಿ ಬಲೆ ಸಂಪೂರ್ಣ ಹಾನಿಗೀಡಾಗಿದ್ದು ಮೀನುಗಾರರು ಆಕ್ರೋಶಗೊಂಡಿದ್ದಾರೆ.

ಮಲ್ಪೆ ಬಂದರಿನ ಗರುಡ ಪರ್ಸಿನ್ ಬೋಟ್ ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಕಳೆದ ಕೆಲವು ದಿನಗಳಿಂದ ಕೋಸ್ಟ್‌ಗಾರ್ಡ್‌ ನವರು ಪರ್ಸಿನ್ ಬೋಟುಗಳ ತಪಾಸಣೆ ನಡೆಸುತ್ತಿದ್ದು, ಇಂದು ಗರುಡ ಬೋಟ್‌ನ ಬಳಿ ಬಂದ ಕೋಸ್ಟ್‌ಗಾರ್ಡ್‌ನವರ ಬೋಟ್ ಮೀನಿಗೆಂದು ಹರಡಿದ್ದ ಬಲೆಯ ಮೇಲೆ ಚಲಿಸಿದೆ. ಅದರ ಫ್ಯಾನ್‌ಗೆ ಸಿಲುಕಿಕೊಂಡ ಬಲೆ ಸಂಪೂರ್ಣ ಹಾನಿಗೀಡಾಗಿ 8 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!