Monday, June 8, 2026
Homeಕರಾವಳಿಬಂಟ್ವಾಳ: ದಾನಿಗಳ ನೆರವಿನಿಂದ ಕುಪ್ಪಿಲದಲ್ಲಿ ನಿರ್ಮಿಸಿದ ನೂತನ 'ಬ್ರಹ್ಮಶ್ರೀ ಮನೆ' ಹಸ್ತಾಂತರ!

ಬಂಟ್ವಾಳ: ದಾನಿಗಳ ನೆರವಿನಿಂದ ಕುಪ್ಪಿಲದಲ್ಲಿ ನಿರ್ಮಿಸಿದ ನೂತನ ‘ಬ್ರಹ್ಮಶ್ರೀ ಮನೆ’ ಹಸ್ತಾಂತರ!

- Advertisement -
- Advertisement -

ಬಂಟ್ವಾಳ: ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಮತ್ತು ಯುವವಾಹಿನಿ ಸಂಚಾಲನ‌ ಸಮಿತಿ ಕುಪ್ಪಿಲ ಪಲ್ಲಮಜಲು ಹಾಗೂ ಸಮಾಜದ ಕೊಡುಗೈ ದಾನಿಗಳ ನೆರವಿನಿಂದ ವಾರಿಜಾಕ್ಷಿ ರುಕ್ಮಯ ಪೂಜಾರಿ ಅವರಿಗೆ ನಿರ್ಮಾಣಗೊಂಡ ಬ್ರಹ್ಮಶ್ರಿ ನಿಲಯದ ಗೃಹಪ್ರವೇಶವು ಪುರೋಹಿತರಾದ ಕೇಶವ ಶಾಂತಿ ನಾಟಿ‌ ಅವರ ಪೌರೋಹಿತ್ಯದಲ್ಲಿ ಆದಿತ್ಯವಾರದಂದು 9:00 ಗಂಟೆಗೆ ಸರಿಯಾಗಿ ವಾಸ್ತು ಹೋಮ,ಗುರುಪೂಜೆ,ಸತ್ಯನಾರಯಣ ಪೂಜೆಯೊಂದಿಗೆ‌ ನೆರವೇರಿತು.

ಬಂಟ್ವಾಳ ತಾಲೂಕು ಬಿಲ್ಲವ‌ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್‌ ಪಚ್ವಿನಡ್ಕ ಅವರು ನೂತನ ಬ್ರಹ್ಮಶ್ರಿ ನಿಲಯದ ಫಲಕವನ್ನು ಅನವಾರಣಗೋಳಿಸಿದರು.

ಬಳಿಕ ಜರಗಿದ‌‌‌ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು‌ ಬಿಲ್ಲವ‌ ಸೇವ‌ ಸಂಘದ ಅಧ್ಯಕ್ಷರಾದ‌ ಕೆ.ಸೇಸಪ್ಪ ಕೋಟ್ಯಾನ್‌ ಅವರು ದೀಪಾ ಬೆಳಗಿಸುವುದರೊಂದಿಗೆ ನೆರವೇರಿಸಿದರು.ಯುವವಾಹಿನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ‌‌ ಬೋಳಂಗಡಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಯುವವಾಹಿನಿ (ರಿ) ಕೇಂದ್ರ ಸಮಿಯ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ನೂತನ ನಿವಾಸದ ಕೀ.ಹಸ್ತಾಂತರಿದರು.ವೇದಿಕೆಯಲ್ಲಿ ಕುದ್ರೋಳಿ ಶ್ರೀ ಗೋಕಾರ್ಣಥೇಶ್ವರ ದೇವಾಸ್ಥಾನದ ಕೋಶಾಧಿಕಾರಿ ಹಾಗೂ ಗುರುಬೆಳದಿಂಗಳು ಟ್ರಸ್ಟ್ ನ ಅಧ್ಯಕ್ಷರಾದ ಪದ್ಮಾರಾಜ್ ಆರ್.ತಾಲೂಕು ಪಂಚಾಯಾತ್ ಬಂಟ್ವಾಳ ಇದರ ಮಾಜಿ‌ ಅಧ್ಯಕ್ಷರಾದ‌ ಯಶವಂತ್ ಪೂಜಾರಿ ದೇರಾಜೆಗುತ್ತು.ಬಂಟ್ವಾಳ ಪುರಸಭೆಯ ಅಧ್ಯಕ್ಷರಾದ ರಾಮಕೃಷ್ಣ ಆಳ್ವ.ಯುವವಾಹಿನಿ ಸಂಚಾಲನ‌ ಸಮಿತಿ ಕುಪ್ಪಿಲ ಇದರ ಅಧ್ಯಕ್ಷರಾದ್ ಪ್ರವೀಣ್ ಕುಮಾರ್ ಉಪಸ್ಥಿತಿತರಿದ್ದರು.ಸಂಚಾಲನ ಸಮಿತಿಯ ಕಾರ್ಯದರ್ಶಿ ವಂದಿಸಿದರು.ದಿನೇಶ್ ‌ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು

- Advertisement -

Latest News

error: Content is protected !!