Wednesday, July 29, 2026
Homeಪ್ರಮುಖ-ಸುದ್ದಿಆಗಸ್ಟ್ 13ರಿಂದ 27ರ ವರೆಗೆ ರಾಜ್ಯ ವಿಧಾನಮಂಡಲ ಮಳೆಗಾಲದ ಅಧಿವೇಶನ

ಆಗಸ್ಟ್ 13ರಿಂದ 27ರ ವರೆಗೆ ರಾಜ್ಯ ವಿಧಾನಮಂಡಲ ಮಳೆಗಾಲದ ಅಧಿವೇಶನ

- Advertisement -
- Advertisement -

ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನವನ್ನು ಆಗಸ್ಟ್ 13 ರಿಂದ 27ರ ವರೆಗೆ ನಡೆಸಲು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಆಗಸ್ಟ್ 13ರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತು ಸಮಾವೇಶಗೊಳ್ಳಲಿದ್ದು, ಖಾಸಗಿ ಮತ್ತು ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ.

ಈ ಎರಡು ವಾರಗಳ ಅಧಿವೇಶನದ ಅವಧಿಯಲ್ಲಿ ಆಗಸ್ಟ್ 15, 16, 22, 23 ಹಾಗೂ 26ರಂದು ಸಾರ್ವತ್ರಿಕ ರಜೆಗಳಿರಲಿದ್ದು, ಉಳಿದ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕಲಾಪಗಳು ಜರುಗಲಿವೆ.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನ ಇದಾಗಿದ್ದು, ಪ್ರತಿಪಕ್ಷಗಳ ಸವಾಲುಗಳನ್ನು ನೂತನ ಸರ್ಕಾರ ಹೇಗೆ ಎದುರಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

- Advertisement -

Latest News

error: Content is protected !!