Thursday, June 4, 2026
Homeಅಪರಾಧರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ ಖಂಡನೀಯ ; ಬಿ.ವೈ.ರಾಘವೇಂದ್ರ 

ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ ಖಂಡನೀಯ ; ಬಿ.ವೈ.ರಾಘವೇಂದ್ರ 

- Advertisement -
- Advertisement -

ಮೈಸೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನನನ್ನು ಬರ್ಬರವಾಗಿ ಮಾರ್ಗದಲ್ಲಿ ಕೊಲೆ ಮಾಡಿದ್ದು ನಿಜಕ್ಕೂ ಆಘಾತಕಾರಿಯಾಗಿದ್ದು, ರಾಜ್ಯದಲ್ಲಿ ಹಿಂದೂ ನಾಯಕರ ಕಗ್ಗೊಲೆ ಖಂಡನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. 

ಅವರು ಶುಕ್ರವಾರದಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಸಾವಿರಾರು ಜನರ ಎದುರು ಓರ್ವ ಹಿಂದೂ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿ ಗುಂಡಾಗಿರಿ ಪ್ರದರ್ಶಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಿಂದೂ ನಾಯಕರ ಹತ್ಯೆ ಹೆಚ್ಚಾಗುತ್ತಿದೆ. ಇದು ಹಿಂದೂತ್ವವನ್ನು ನಿರ್ಣಾಮ ಮಾಡಲು ಹೂಡಿರುವಂತಹ ಷಡ್ಯಂತ್ರ. ಹಿಂದೂ ಧರ್ಮದ ಭದ್ರ ಬುನಾದಿಯಾಗಿರುವ ಶಿವಮೊಗ್ಗ, ಮಂಗಳೂರು, ಮೈಸೂರಿನಲ್ಲಿ ಇಂಥ ಘಟನೆಗಳು ಮರುಕಳಿಸುತ್ತಿವೆ,” ಎಂದರು.

- Advertisement -

Latest News

error: Content is protected !!