Sunday, May 19, 2024
Homeಕರಾವಳಿಉಡುಪಿತೆಕ್ಕಟ್ಟೆ: ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ, ಚಾಲಕನ ಸ್ಥಿತಿ ಗಂಭೀರ

ತೆಕ್ಕಟ್ಟೆ: ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ, ಚಾಲಕನ ಸ್ಥಿತಿ ಗಂಭೀರ

spot_img
- Advertisement -
- Advertisement -

ತೆಕ್ಕಟ್ಟೆ: ತಾಲೂಕಿನ ಹೆಸ್ಕುತ್ತೂರುನಲ್ಲಿ ಇಂದು ಮುಂಜಾನೆ
ಶಿಲೆಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಶಿರಿಯಾರ ಕಡೆಯಿಂದ ಬೃಹತ್ ಶಿಲೆಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿ, ಹೆಸ್ಕುತ್ತೂರು – ಶಿರಿಯಾರ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಇದರ ಪರಿಣಾಮ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಅತೀ ವೇಗವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಬ್ರಿಡ್ಜ್ ಗೆ ಹಾನಿಯಾಗಿದೆ. ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -
spot_img

Latest News

error: Content is protected !!