Sunday, June 7, 2026
Homeಕರಾವಳಿವಿಟ್ಲ; ರಿಂಗ್ ಹಾಕಲು ಬಾವಿಗೆ ಇಳಿದ ಕಾರ್ಮಿಕರು ಉಸಿರುಗಟ್ಟಿ ಸಾವು

ವಿಟ್ಲ; ರಿಂಗ್ ಹಾಕಲು ಬಾವಿಗೆ ಇಳಿದ ಕಾರ್ಮಿಕರು ಉಸಿರುಗಟ್ಟಿ ಸಾವು

- Advertisement -
- Advertisement -

ವಿಟ್ಲ; ರಿಂಗ್ ಹಾಕಲು ಬಾವಿಗೆ ಇಳಿದ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಶಾಲೆಯ ಬಳಿ ನಡೆದಿದೆ.

ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ, ಮಲಾರ್ ನಿವಾಸಿ ಅಲಿ ಮೃತ ದುರ್ದೈವಿಗಳು. ಇಬ್ಬರು ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ಅದನ್ನು ಕ್ಲೀನ್ ಮಾಡಲು ಬಾವಿಗೆ ಇಳಿದಿದ್ದರು. ಈ ವೇಳೆ ಆಕ್ಸಿಜನ್ ಕೊರತೆಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಆರಂಭದಲ್ಲಿ ಒಬ್ಬ ಕಾರ್ಮಿಕ ಬಾವಿಗೆ ಇಳಿದಿದ್ದರು. ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಮತ್ತೊಬ್ಬರು ಇಳಿದಿದ್ದಾರೆ. ಆಗ ಅವರು ಕೂಡ ಆಕ್ಸಿಜನ್ ಸಮಸ್ಯೆಯಾಗಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ವಿಟ್ಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

- Advertisement -

Latest News

error: Content is protected !!