Wednesday, June 24, 2026
Homeಅಪರಾಧಹೆಂಡತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ರೈಲ್ವೇ ಟ್ರ್ಯಾಕ್‌ಗೆ ತಲೆ ಕೊಟ್ಟ ಗಂಡ

ಹೆಂಡತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ರೈಲ್ವೇ ಟ್ರ್ಯಾಕ್‌ಗೆ ತಲೆ ಕೊಟ್ಟ ಗಂಡ

- Advertisement -
- Advertisement -

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ರೈಲ್ವೇ ಟ್ರ್ಯಾಕ್‌ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಲದೇವನಹಳ್ಳಿ ಬಳಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ರಮೇಶ್ ಎಂದು ಗುರುತಿಸಲಾಗಿದೆ.

ರಮೇಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಶಿಲ್ಪಾ ಮತ್ತು ಆಕೆಯ ಬಾಯ್ ಫ್ರೆಂಡ್ ಸಂಜು ಎಂಬಾತ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಸಾವನ್ನಪ್ಪುವ ಮುನ್ನ ಇಬ್ಬರ ಫೋಟೋವನ್ನು ಸ್ಟೇಟಸ್ ಹಾಕಿದ್ದು, ತನ್ನ ಸಾವಿಗೆ ಕಾರಣರಾದ ಇಬ್ಬರಿಗೂ ಶಿಕ್ಷೆ ನೀಡಿ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಈ ಘಟನೆಯ ಕುರಿತು ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಮತ್ತು ಇನ್ನೋರ್ವ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದೆ.

- Advertisement -

Latest News

error: Content is protected !!