Thursday, June 4, 2026
Homeಚಿಕ್ಕಮಗಳೂರುದೀಪಾವಳಿ ಪಟಾಕಿ ತಂದ ಅವಾಂತರ; ರಾಕೆಟ್ ನಿಂದ ಹತ್ತಿಕೊಂಡ ಬೆಂಕಿಗೆ ಮನೆ ಭಸ್ಮ

ದೀಪಾವಳಿ ಪಟಾಕಿ ತಂದ ಅವಾಂತರ; ರಾಕೆಟ್ ನಿಂದ ಹತ್ತಿಕೊಂಡ ಬೆಂಕಿಗೆ ಮನೆ ಭಸ್ಮ

- Advertisement -
- Advertisement -

ಚಿಕ್ಕಮಗಳೂರು : ಪಟಾಕಿಯಿಂದ ಸಿಡಿದ ಕಿಡಿಯೊಂದು ಮನೆಯೊಂದಕ್ಕೆ ತಗುಲಿ ಬೆಂಕಿ ಹತ್ತಿಕೊಂಡ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ.

ರಾತ್ರಿ ಸಮಯದಲ್ಲಿ ಛತ್ರಮೈದಾನದಲ್ಲಿ ಪಟಾಕಿ‌ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್ ವೊಂದು‌ ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದೆ. ಬಟ್ಟೆಗೆ ಬೆಂಕಿ ಹಿಡಿದುಕೊಂಡು ಆ ಬೆಂಕಿ ಇಡಿ‌ ಮನೆಗೆ ಆವರಿಸಿದೆ.ಕೂಡಲೇ ಸ್ಥಳೀಯರು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ‌. ಮನೆಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದೆ ‌ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ .

- Advertisement -

Latest News

error: Content is protected !!