Friday, June 5, 2026
Homeತಾಜಾ ಸುದ್ದಿತನ್ನ ನಿವಾಸಕ್ಕೆ ಮುತ್ತಿಗೆ ಹಾಕಿದವರು ನಿಜವಾಗಿಯೂ ಎಬಿವಿಪಿ ಕಾರ್ಯಕರ್ತರೇ? ಅನುಮಾನ ವ್ಯಕ್ತಪಡಿಸಿದ ಗೃಹಸಚಿವ

ತನ್ನ ನಿವಾಸಕ್ಕೆ ಮುತ್ತಿಗೆ ಹಾಕಿದವರು ನಿಜವಾಗಿಯೂ ಎಬಿವಿಪಿ ಕಾರ್ಯಕರ್ತರೇ? ಅನುಮಾನ ವ್ಯಕ್ತಪಡಿಸಿದ ಗೃಹಸಚಿವ

- Advertisement -
- Advertisement -

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನೆಲೆಯಲಿ ಆಕ್ರೋಶಗೊಂಡ ಎಬಿವಿಪಿ ಕಾರ್ಯಕರ್ತರು ಇಂದು ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿದ್ರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರಿನ ತನ್ನ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅವರು ನಿಜವಾಗಿಯೂ ಎಬಿವಿಬಿ ಕಾರ್ಯಕರ್ತರೇ..? ಎಂಬ ಅನುಮಾನ ಕಾಡಿದೆ. ಪಿಎಫ್ಐ, ಎಸ್ ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ಅವರು ಎಬಿವಿಪಿ ಕಾರ್ಯಕರ್ತರೇ ಆಗಿದ್ದರೆ ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರ ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತದೆ” ಎಂದು ಹೇಳಿದ್ರು.

- Advertisement -

Latest News

error: Content is protected !!