- Advertisement -
![]()
- Advertisement -
ಬೆಂಗಳೂರು: ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಹಳ ನಿರೀಕ್ಷೆಯ ಬಿಗ್ಬಾಸ್ ಸೀಸನ್ 8 ಆರಂಭವಾಗಲಿದೆ. ಎಲ್ಲಾ ಸರಿಯಾಗಿದ್ದಿದ್ದರೆ ಈಗಾಗಲೇ ಷೋ ಆರಂಭವಾಗಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ವರ್ಷದ ಬಿಗ್ಬಾಸ್ ಗೆ ಈಗ ಮುಹೂರ್ತ ನಿಗದಿಯಾಗಿದೆ. ಜನವರಿ ಮೂರನೇ ವಾರದಿಂದ ಬಿಗ್ಬಾಸ್ ಶುರುವಾಗಲಿದೆ. ಒಟ್ಟು 15 ಮಂದಿ ಸ್ಫರ್ಧಿಗಳು ಇರಲಿದ್ದು, ಎಲ್ಲರೂ ಸೆಲೆಬ್ರಿಟಿಗಳೇ ಆಗಿರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಕಲರ್ಸ್ ಕನ್ನಡದಲ್ಲಿ ಆರಂಭ ವಾಗಲಿರುವ ಬಿಗ್ಬಾಸ್ ಕುರಿತು ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದು ಈ ಕುರಿತು ತಮ್ಮ ಫೇಸ್ಬುಕ್ನಲ್ಲಿ ಸುಳಿವು ನೀಡಿದ್ದಾರೆ.ಕೊರೋನಾ ನೀತಿನಿಯಮಗಳಿಗೆ ಅನುಸಾರವಾಗಿ ಕಾರ್ಯಕ್ರಮ ರೂಪುಗೊಳ್ಳಲಿದೆ.
- Advertisement -


