- Advertisement -
- Advertisement -
ಅಂಟಾರ್ಕ್ಟಿಕಾ: ಈ ಹಿಂದೆ ಕೊರೊನಾ ವೈರಸ್ ಮುಕ್ತ ವಿಶ್ವದ ಏಕೈಕ ಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಂಟಾರ್ಕ್ಟಿಕಾದಲ್ಲಿ ಈಗ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ.ಚಿಲಿಯ ಸಂಶೋಧನಾ ನೆಲೆಯೊಂದರಲ್ಲಿ 36 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಇಲ್ಲಿನ ಚಿಲಿ ಮಿಲಿಟರಿಯ 26 ಸದಸ್ಯರು ಮತ್ತು ಅಂಟಾರ್ಕ್ಟಿಕಾ ಪೆನಿನ್ಸುಲಾದ ಜನರಲ್ ಬರ್ನಾರ್ಡೊ ಒ’ಹಿಗ್ಗಿನ್ಸ್ ನೆಲೆಯಲ್ಲಿ ಬೀಡು ಬಿಟ್ಟಿರುವ 10 ನಿರ್ವಹಣಾ ಕಾರ್ಮಿಕರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.ಕೆಲವರಲ್ಲಿ ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದ್ದು. ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
.
- Advertisement -