Monday, June 8, 2026
Homeತಾಜಾ ಸುದ್ದಿ104 ವರ್ಷದ ಪ್ರಸೂತಿ ತಜ್ಞನ ಕೃತ್ಯ- ತನ್ನ ಬಳಿ ಚಿಕಿತ್ಸೆ ಪಡೆದ ಮಹಿಳೆಯರ 9 ಸಾವಿರ...

104 ವರ್ಷದ ಪ್ರಸೂತಿ ತಜ್ಞನ ಕೃತ್ಯ- ತನ್ನ ಬಳಿ ಚಿಕಿತ್ಸೆ ಪಡೆದ ಮಹಿಳೆಯರ 9 ಸಾವಿರ ಮಕ್ಕಳಿಗೆ ಈತನೇ ತಂದೆ

- Advertisement -
- Advertisement -

ಮಿಚಿಗನ್: ಇಲ್ಲಿನ 104 ವರ್ಷದ ಡಾ. ಫಿಲಿಪ್ ಪೇವೆನ್‌ ಎಂಕ್ಬಾ ಎಂಬ ವೈದ್ಯ ಪ್ರಸೂತಿ ತಜ್ಞ ಹಾಗೂ ಸ್ತ್ರೀರೋಗತಜ್ಞ. ಇದೇ ಕ್ಷೇತ್ರದಲ್ಲಿ 40 ವರ್ಷಗಳ ಅಪಾರ ಅನುಭವ ಇವರಿಗಿದೆ.ಈ ವೈದ್ಯರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ.ಈತ ವಿಶ್ವದಲ್ಲಿಯೇ ಫೇಮಸ್​ ಆಗಲು ಕಾರಣ ತಮ್ಮ 40 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ 9 ಸಾವಿರ ಮಕ್ಕಳಿಗೆ ಇವರು ತಂದೆಯಾಗಿದ್ದಾರೆ ಎಂಬ ಸುದ್ದಿ.

ಇವರು ಸುಮಾರು ಒಂಬತ್ತು ಸಾವಿರ ಮಕ್ಕಳ ತಂದೆಯೆಂಬ ರಹಸ್ಯ ತಿಳಿದಿದ್ದು ಒಂದು ವಿಶೇಷ. ಮಕ್ಕಳಿಲ್ಲದ ದಂಪತಿ ಚಿಕಿತ್ಸೆಗೆಂದು ಈತನ ಬಳಿ ಬಂದಾಗ, ಪುರುಷರಲ್ಲಿ ವೀರ್ಯದ ಕೊರತೆ ಅಥವಾ ಸಮಸ್ಯೆಗಳಿಂದ ಮಕ್ಕಳಾಗುವುದಿಲ್ಲ ಎಂದು ತಿಳಿದಾಗ ಅವರ ಅರಿವಿಗೆ ಬಾರದೇ ತಮ್ಮದೇ ವೀರ್ಯವನ್ನು ದಾನ ಮಾಡುವ ಮೂಲಕ ದಂಪತಿಗೆ ಮಕ್ಕಳಾಗುವ ಹಾಗೆ ಈತ ಮಾಡುತ್ತಿದ್ದ.

ಜೇಮ್​ ಹಾಲ್​ ಎಂಬಾಕೆಗೆ ತನ್ನ ಡಿಎನ್​ಎಯನ್ನು ಪರೀಕ್ಷೆ ಮಾಡಬೇಕಾಗಿ ಬಂದಾಗ ಅವರ ಡಿಎನ್​ಎ ತಂದೆ-ತಾಯಿಯ ಡಿಎನ್​ಎಗೆ ಮ್ಯಾಚ್​ ಆಗಿರಲಿಲ್ಲ. ಕುಟುಂಬದಲ್ಲಿ ಯಾರ ಡಿಎನ್​ಎಯೂ ಮ್ಯಾಚ್​ ಆಗಲಿಲ್ಲ.ಅಂತಿಮವಾಗಿ ಇದೇ ವೈದ್ಯ ತನ್ನ ತಂದೆ ಎಂದು ತಿಳಿದಿದೆ.

- Advertisement -

Latest News

error: Content is protected !!