Thursday, July 2, 2026
Homeಅಪರಾಧಹತ್ತು ವರ್ಷದ ಮಗಳನ್ನು ಹಗ್ಗದಿಂದ ಬಿಗಿದು ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

ಹತ್ತು ವರ್ಷದ ಮಗಳನ್ನು ಹಗ್ಗದಿಂದ ಬಿಗಿದು ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

- Advertisement -
- Advertisement -

ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ತಂದೆಯೊಬ್ಬ ತನ್ನ ಹತ್ತು ವರ್ಷದ ಮಗಳನ್ನು ಹಗ್ಗದಿಂದ ಬಿಗಿದು ಕಟ್ಟಿ ತಲೆಕೆಳಗಾಗಿ ನೇತು ಹಾಕಿಸಿ ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿ ಥಳಿತಕ್ಕೊಳಗಾದ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಗಳಿಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ಕಂಡ ನೆರೆಮನೆಯವರು ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ನೆರೆಮನೆಯವರಿಂದ ಘಟನೆ ಬಗ್ಗೆ ಮಾಹಿತಿ ತಿಳಿದ ಬಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜಾ ದಿನೇಶ್ ಸಿಂಗ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ತಂದೆಯೇ ತನ್ನ ಮಗಳನ್ನು ಹಗ್ಗದಿಂದ ಬಿಗಿದು ನೇತು ಹಾಕಿ ಮನಬಂದಂತೆ ಥಳಿಸಿದ್ದಾನೆ ಈ ಕುರಿತು ನೆರೆಮನೆಯವರು ನೀಡಿದ ದೂರಿನ ಮೇರೆಗೆ ಆರೋಪಿ ಗೋವಿಂದ್ ರೈ ರೈಕ್ವಾರ್ ನನ್ನು ಬಂಧಿಸಲಾಗಿದೆ, ವಿಚಾರಣೆ ನಡೆಸಿದ ವೇಳೆ ಆರೋಪಿ ತನ್ನ ಮಗಳು ನಾನು ಹೇಳಿದಂತೆ ಕೇಳುತ್ತಿಲ್ಲ, ನನ್ನ ಮಾತು ಕೇಳದಕ್ಕೆ ಸಿಟ್ಟಿಗೆದ್ದು ಆಕೆಯನ್ನು ಥಳಿಸಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಸತ್ಯಂಶ ಹೊರಬಿದ್ದಿದೆ ಎನ್ನಲಾಗಿದೆ.

- Advertisement -

Latest News

error: Content is protected !!