Sunday, May 19, 2024
Homeಕರಾವಳಿಉಡುಪಿಉಡುಪಿ; ;ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಕಾರು

ಉಡುಪಿ; ;ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಕಾರು

spot_img
- Advertisement -
- Advertisement -

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಘಟನೆ ಮಣಿಪಾಲದ ಪೆರಂಪಳ್ಳಿ ಸುಂದರಿ ಗೇಟ್ ಸಮೀಪ ಸೋಮವಾರ ತಡರಾತ್ರಿ ನಡೆದಿದೆ. ಕಾರಿನಲ್ಲಿ ಇತರ 2-3 ಮಂದಿ ಇದ್ದರೆನ್ನಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರು ಮಾತ್ರ ನಜ್ಜುಗುಜ್ಜಾಗಿದೆ.


ಮರವಂತೆ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ 2-3 ಪಲ್ಟಿಯಾಗಿ ಮತ್ತೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಅಲ್ಲಿ ಬಾಕಿಯಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ


ಅಪಘಾತ ಸಂಭವಿಸಿದ ಪ್ರದೇಶ ತಿರುವಿನಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ವಾರಕ್ಕೆ ಒಂದೆರಡು ಅಪಘಾತಗಳು ಇಲ್ಲಿ ಸರ್ವೇ ಸಾಮಾನ್ಯ. ಈ ತಿರುವನ್ನು ಸರಿ ಮಾಡಬೇಕೆಂದು ಆಗ್ರಹಿಸಿದರೂ ಇದುವರೆಗೆ ಸರಿ ಮಾಡಿಲ್ಲ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!