Saturday, May 18, 2024
Homeಕರಾವಳಿಉಡುಪಿಉಡುಪಿ: ತ್ಯಾಜ್ಯದಿಂದ ಕೂಡಿದ್ದ ಜಾಗದಲ್ಲಿ ಈಗ ಸಣ್ಣ ಉದ್ಯಾನವನ ಸೃಷ್ಟಿ!

ಉಡುಪಿ: ತ್ಯಾಜ್ಯದಿಂದ ಕೂಡಿದ್ದ ಜಾಗದಲ್ಲಿ ಈಗ ಸಣ್ಣ ಉದ್ಯಾನವನ ಸೃಷ್ಟಿ!

spot_img
- Advertisement -
- Advertisement -

ಉಡುಪಿ: ತ್ಯಾಜ್ಯ ರಾಶಿಯಿಂದ ಗಬ್ಬು ನಾರುತ್ತಿದ್ದ ಜಾಗವೊಂದು ಈಗ ಉದ್ಯಾನವನವಾಗಿ ಬದಲಾದ ದೃಶ್ಯವೊಂದು ಮಲ್ಪೆಯ ಕೊಡವೂರು ಗ್ರಾಮದ ಬಲರಾಮ ನಗರದ ಮುಖ್ಯರಸ್ತೆಯಲ್ಲಿ ಕಾಣ ಸಿಗುತ್ತದೆ.

ಇದೆಲ್ಲ ಸಾಧ್ಯವಾಗಿದ್ದು ಅಲ್ಲಿನ ವಡಬಾಂಡೇಶ್ವರ ಕ್ರಿಕೆಟ್‌ ಕ್ಲಬ್‌, ಸಾಹಸ್ ಸಂಸ್ಥೆ ಹಾಗೂ ಗ್ರಾಮಸ್ಥರಿಂದ. ಹಿಂದೆ, ಬಲರಾಮ ನಗರದ ಮುಖ್ಯರಸ್ತೆಯ ಖಾಲಿ ಜಾಗ ಕಸ ವಿಲೇವಾರಿಯ ಸ್ಥಳವಾಗಿ ಬದಲಾಗಿತ್ತು. ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ಗೆ ಇದೇ ಮಾರ್ಗದಲ್ಲಿ ಹೋಗಬೇಕಿದ್ದರಿಂದ ಪ್ರವಾಸಿಗರಿಗೆ ಕಿರಿಕಿರಿಯ ಅನುಭವ ಉಂಟಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ನೀಡಲು ವಡಬಾಂಡೇಶ್ವರ ಕ್ರಿಕೆಟ್ ಕ್ಲಬ್ ಮಂಜು ಕೊಳ ನೇತೃತ್ವದ ಯುವಕರ ತಂಡ ನಿರ್ಧರಿಸಿತು.

ಒಟ್ಟಾಗಿ ಶ್ರಮದಾನದ ಮೂಲಕ ಕಸವನ್ನೆಲ್ಲ ವಿಲೇವಾರಿ ಮಾಡಿದ್ದು, ಈಗ ತ್ಯಾಜ್ಯವಿದ್ದ ಸ್ಥಳದಲ್ಲಿ ಗಿಡಗಳನ್ನು ನೆಡಲಾಗಿದೆ. ಕಸ ಎಸೆಯದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಊರನ್ನು ಸ್ವಚ್ಛಗೊಳಿಸಿದರೆ ದೇಶ ಸ್ವಚ್ಛವಾಗಲಿದೆ ಎನ್ನುತ್ತಿದ್ದಾರೆ ಬಲರಾಮ ನಗರದ ನಿವಾಸಿಗಳು

- Advertisement -
spot_img

Latest News

error: Content is protected !!