ಮೂಡುಬಿದಿರೆ: ಬಂಟರ ಮಹಿಳಾ ಸಂಘ ಮೂಡುಬಿದಿರೆ ಘಟಕದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು, ‘ಬಂಟ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಪೂರ್ವವಾಗಿದ್ದು, ಸಮಾಜವು ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ,’ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಅಮರನಾಥ್ ಶೆಟ್ಟಿ ಮಾತನಾಡಿ, ಬಂಟರ ಮಹಿಳಾ ಸಂಘ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಬಂಟರ ಸಂಘ ಬಂಟ್ವಾಳದ ಅಧ್ಯಕ್ಷ ಚಂದ್ರಹಾಶೆಟ್ಟಿ, ಅಮರನಾಥಶೆಟ್ಟಿ ಹಂಡಿಂಜೆ ಗುತ್ತು, ಡಾ.ಅಮರಶ್ರೀ ಅಮರನಾಥ್ ಶೆಟ್ಟಿ, ಕೆ.ಪಿ ಸುಚರಿತ ಶೆಟ್ಟಿ, ಎಂ.ಪುರುಷೋತ್ತಮ ಶೆಟ್ಟಿ, ದಿವಾಕರ ಶೆಟ್ಟಿ ಭಾಗವಹಿಸಿದ್ದರು.
ಮಹಿಳಾ ಘಟಕದ ಕೋಶಾಧಿಕಾರಿ ಗೀತಾ ಪಿ.ಶೆಟ್ಟಿ ಭಾಗವಹಿಸಿದ್ದರು. ಸುಜಾತ ಶೆಟ್ಟಿ ಅವರು ಸ್ವಾಗತಿಸಿದರು. ರಂಜಿತಾ ಶೆಟ್ಟಿ ನಿರೂಪಿಸಿದರು. ಸೌಮ್ಯ ಎಸ್.ಶೆಟ್ಟಿ ವಂದಿಸಿದರು.


