Friday, May 17, 2024
Homeತಾಜಾ ಸುದ್ದಿರಾಜ್ಯದಲ್ಲಿ ಗಲಭೆಕೋರರನ್ನು ಮಟ್ಟ ಹಾಕಲು 'ಬುಲ್ಡೋಜರ್' ಬಂದ್ರೆ ಒಳ್ಳೆಯದು: ಅರೆಸ್ಟ್ ಮಾಡಿದ್ರೆ ಜಾಮೀನು ತಗೊಂಡು ಅದೇ...

ರಾಜ್ಯದಲ್ಲಿ ಗಲಭೆಕೋರರನ್ನು ಮಟ್ಟ ಹಾಕಲು ‘ಬುಲ್ಡೋಜರ್’ ಬಂದ್ರೆ ಒಳ್ಳೆಯದು: ಅರೆಸ್ಟ್ ಮಾಡಿದ್ರೆ ಜಾಮೀನು ತಗೊಂಡು ಅದೇ ಕೆಲಸ ಮಾಡ್ತಾರೆ: ಸಚಿವ ಆರ್.‌ಅಶೋಕ್

spot_img
- Advertisement -
- Advertisement -

ದೇವನಹಳ್ಳಿ: ಗಲಭೆ ಮಾಡುವವರನ್ನ ಅರೆಸ್ಟ್ ಮಾಡಿದ್ರೆ ಜಾಮೀನು ತಗೊಂಡು ಬಂದು ಮತ್ತೆ ಅದೇ ಕೆಲಸ ಮಾಡ್ತಾರೆ. ಹುಬ್ಬಳ್ಳಿಯಲ್ಲಿ ಅರೆಸ್ಟ್ ಆದವರೆಲ್ಲಾ ರೌಡಿ ಶೀಟರ್ ಗಳು. ಆಚೆ ಬಂದು ಮತ್ತೆ ಒಂದು ವಾರಕ್ಕೆ ಕಥೆ ಶುರು ಮಾಡಿದ್ದಾರೆ. ಅಂದ್ರೆ ಅವರು ಬುದ್ದಿ ಕಲಿಯಲ್ಲ. ಇಂಥವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಮನೆ ಮಠ‌ ಇಲ್ಲದ ಹಾಗೆ ಮಾಡಬೇಕು. ಆಗ ದಾರಿಗೆ ಬರ್ತಾರೆ ಎಂದು ಸಚಿವ ಆರ್‌ ಅಶೋಕ್ ತಿಳಿಸಿದ್ದಾರೆ.

ದೇವನಹಳ್ಳಿ ಸಮೀಪದ ವಿಜಯಪುರದಲ್ಲಿ ನಡೆದ ಬಿಜೆಪಿ ಸಮಾವೇಶದ ವೇಳೆ ಸುದ್ದಿಗಾರರೊಂದಿಗೆ ಸಚಿವ ಆರ್‌ ಅಶೋಕ್‌ ಮಾತನಾಡಿದರು. ಈ ವೇಳೆ ಜೈಲಿಗೆ ಹೋಗಿ ಬಂದವರು ಮತ್ತೆ ಅದೇ ಕೆಲಸ‌ ಮಾಡ್ತಾರೆ. ಈ ತರದ ಮನಸ್ಥಿತಿ ಇರೋರಿಗೆ ಉತ್ತರ ಪ್ರದೇಶ ಮಾದರಿಯ ಕಾನೂನು ಬರಬೇಕು. ಎಲ್ಲರೂ ಕೆಟ್ಟವರಲ್ಲ. ಮುಸ್ಲಿಮರಲ್ಲಿ ಬಹಳ‌ ಒಳ್ಳೆಯವರು ಇದ್ದಾರೆ. ಕೆಲ ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಇಂಥ ಬುಲ್ಡೋಜರ್‌ ಕಾರ್ಯಾಚರಣೆ ಅವಶ್ಯಕ ಎಂದು ಸಚಿವ ಅಶೋಕ್‌ ತಿಳಿಸಿದರು.‌

- Advertisement -
spot_img

Latest News

error: Content is protected !!