Friday, June 5, 2026
Homeರಾಜಕೀಯಇಂದು ಮಂಡಿಸಿರುವ ಬಜೆಟ್ ಅತ್ಯಂತ ನಿರಾಸವಾದ ಬಜೆಟ್ ಆಗಿದೆ: ಮಾಜಿ ಸಿಎಂ ಸಿದ್ಧರಾಮಯ್ಯ

ಇಂದು ಮಂಡಿಸಿರುವ ಬಜೆಟ್ ಅತ್ಯಂತ ನಿರಾಸವಾದ ಬಜೆಟ್ ಆಗಿದೆ: ಮಾಜಿ ಸಿಎಂ ಸಿದ್ಧರಾಮಯ್ಯ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂಡಿಸಿದ ಮೊದಲ ಬಜೆಟ್‌‌ನಲ್ಲಿ ಯಾವುದೇ ಹೊಸ ಚಿಂತನೆಯಿಲ್ಲ. ಇದು ಅತ್ಯಂತ ನಿರಾಶಾದಾಯಕವಾದಂತ ಬಜೆಟ್ ಆಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬಜೆಟ್ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂದು ಮಂಡಿಸಿರುವ ಬಜೆಟ್ ಅತ್ಯಂತ ನಿರಾಸವಾದ ಬಜೆಟ್ ಆಗಿದೆ. ಅಭಿವೃದ್ಧಿ ಪರವಿಲ್ಲದ್ದಾಗಿದೆ. ನವ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ಆದರೆ ಬಜೆಟ್ ನಲ್ಲಿ ಯಾವುದೇ ಮುಂದಾಲೋಚನೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ .

ಇನ್ನು ಇಲಾಖಾವಾರು ಬಜೆಟ್ ಮಂಡಿಸಬೇಕು. ಆದರೆ ವಲಯವಾರು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಪಾರದರ್ಶಕತೆಯಿಲ್ಲ. ಯಾವುದಕ್ಕೆ ಎಷ್ಟು ಮೀಸಲಿಟ್ಟಿದ್ದಾರೆ ಗೊತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳು ಎಂದಿದ್ದಾರೆ. ಆದರೆ ಪಂಚಸೂತ್ರಗಳಿಗೆ ಇದು ತದ್ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

Latest News

error: Content is protected !!