Tuesday, July 2, 2024
Homeಕರಾವಳಿಉಡುಪಿದೇವಸ್ಥಾನದ ಹತ್ತಿರದ ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ದೇವಸ್ಥಾನದ ಹತ್ತಿರದ ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

spot_img
- Advertisement -
- Advertisement -

ಪರ್ಕಳ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಹತ್ತಿರ ನಿರ್ಮಾಣವಾಗುತ್ತಿರುವ ಕೆರೆ ಈ ಬಾರಿಯೂ ಮೊದಲ ಮಳೆಗೆಯೇ ಕುಸಿದಿದ್ದು ಉಡುಪಿಯ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರು ಭೇಟಿ ನೀಡಿ ಪರಿಶೀಲಿಸಿದರು.

ಈ ಕೆರೆಯು ಬಹುಕೋಟಿ ಅನುದಾನದಿಂದ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗುತ್ತಿದ್ದು, ಈಗ ನಾಲ್ಕನೇ ಬಾರಿಯೂ ಕೆರೆದಂಡೆ ಕುಸಿದಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಮುಖ್ಯ ಕಾರಣ ಅವೈಜ್ಞಾನಿಕದ ವಿನ್ಯಾಸ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯೇ ಎನ್ನಲಾಗಿದೆ. ಕೆರೆಯ ಅಕ್ಕಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ತೋಡು ನಿರ್ಮಾಣ ಮಾಡದೆ ಇರುವುದು, ಈ ಬಾರಿ ಕೆರೆಯ ಪಕ್ಕದಲ್ಲಿ ಯಥೇಚ್ಛವಾಗಿ ಸುತ್ತಲ ಶೇಡಿಮಣ್ಣನ್ನು ತೆಗೆದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಸ್ಥಳೀಯರು ಕಳಪೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ. ಕೆರೆಯ ಈ ರೀತಿಯ ದಂಡೆ ಕುಸಿಯಲು ಸುತ್ತಮುತ್ತದ ಮರ ಹಾಗೂ ಪಕ್ಕದಲ್ಲಿರುವ ಮಣ್ಣು ಅಗೆದು ಬೇರಡೆ ಸಾಗಾಟವೇ ಮೂಲ ಕಾರಣವೆಂದು ದೂರಿದ್ದಾರೆ.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!