Thursday, June 4, 2026
Homeಕರಾವಳಿಉಡುಪಿರಾಜ್ಯದ ಪಿಎಫ್‌ಐ, ಎಸ್‌ಡಿಪಿಐ ಮೇಲೆ ನಡೆದಿರೋದು ಪೊಲೀಸ್‌ ದಾಳಿ ಅಲ್ಲ: ಇದು ಮುನ್ನೆಚ್ಚರಿಕೆಯ ಕಾರ್ಯಾಚರಣೆ ಅಷ್ಟೇ:...

ರಾಜ್ಯದ ಪಿಎಫ್‌ಐ, ಎಸ್‌ಡಿಪಿಐ ಮೇಲೆ ನಡೆದಿರೋದು ಪೊಲೀಸ್‌ ದಾಳಿ ಅಲ್ಲ: ಇದು ಮುನ್ನೆಚ್ಚರಿಕೆಯ ಕಾರ್ಯಾಚರಣೆ ಅಷ್ಟೇ: ಸಿಎಂ

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ಪಿಎಫ್​ಐ ಮತ್ತು ಎಸ್​ಡಿಪಿಐ ಮೇಲೆ ನಡೆದಿರುವುದು ಪೊಲೀಸ್ ದಾಳಿ ಅಲ್ಲ, ಇದು ನಮ್ಮ ಪೊಲೀಸರು ಮುನ್ನೆಚ್ಚರಿಕೆಯಿಂದ ನಡೆಸಿರುವ ಕಾರ್ಯಾಚರಣೆ ಅಷ್ಟೇ. ತಹಶೀಲ್ದಾರ್ ಮೂಲಕವೇ ಪೊಲೀಸರು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಜರುಗಿಸಿದ್ದಾರೆ  ಕರ್ನಾಟಕವಷ್ಟೇ ಅಲ್ಲ, ಇತರ ರಾಜ್ಯಗಳಲ್ಲಿಯೂ ಇಂಥ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ, ನಂತರ ಅಧಿಕೃತವಾಗಿ ಪ್ರತಿಕ್ರಿಯಿಸುತ್ತೇನೆ. ಪೊಲೀಸರಿಗೆ ವಿವಿಧೆಡೆಯಿಂದ ಹತ್ತು ಹಲವು ಮಾಹಿತಿ ಬಂದಿರುತ್ತವೆ ಎಂದು ಹೇಳಿದರು.

- Advertisement -

Latest News

error: Content is protected !!