Thursday, June 4, 2026
Homeಕರಾವಳಿಮಂಗಳೂರು: ಬೈಕ್ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು !

ಮಂಗಳೂರು: ಬೈಕ್ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು !

- Advertisement -
- Advertisement -

ಮಂಗಳೂರು: ಫೆಬ್ರವರಿ 28 ರಂದು ಯೆಕ್ಕೂರಿನಿಂದ ವೋರ್ಕಾಡಿಗೆ ಮೋಟಾರ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಡೆದ ಅಪಘಾತದಿಂದಾಗಿ ನಾಗಪ್ಪ ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.

ಯೆಕ್ಕೂರಿನಲ್ಲಿ ವಾಸವಿದ್ದ ವೋರ್ಕಾಡಿಯ ಗುಡ್ಡದೊಡ್ಡಿ ನಿವಾಸಿ ನಾಗಪ್ಪ (68) ಅವರ ದ್ವಿಚಕ್ರ ವಾಹನಕ್ಕೆ ಮತ್ತೊಂದು ಬೈಕ್ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡಿದ್ದರು.

ನಾಗಪ್ಪ ಅವರು ಕೊಡ್ಲಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ನಿವೃತ್ತಿಯ ನಂತರ ಮಂಜೇಶ್ವರದ ರಾಗಂನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು.

ನಾಗಪ್ಪ ಅವರು ತಮ್ಮ ಪತ್ನಿ ಅಪ್ಪಿ ಬಾಯಿ, ಪುತ್ರಿ ದೀಪ್ತಿ ಮತ್ತು ಅಳಿಯ ಅರ್ಪಿತ್ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!