Tuesday, May 14, 2024
Homeತಾಜಾ ಸುದ್ದಿಮೂರನೇ ತರಗತಿಯಲ್ಲೂ ಬಾವಿಯಲ್ಲಿ ಚಂದ್ರ ಕಂಡ, ನಾಲ್ಕನೇ ತರಗತಿಯಲ್ಲೂ ಬಾವಿಯಲ್ಲಿ ಕಂಡ ಚಂದ್ರ:  ಪದೇ ಪದೇ...

ಮೂರನೇ ತರಗತಿಯಲ್ಲೂ ಬಾವಿಯಲ್ಲಿ ಚಂದ್ರ ಕಂಡ, ನಾಲ್ಕನೇ ತರಗತಿಯಲ್ಲೂ ಬಾವಿಯಲ್ಲಿ ಕಂಡ ಚಂದ್ರ:  ಪದೇ ಪದೇ ಬಾವಿಯಲ್ಲಿ ಚಂದ್ರನ ನೋಡಿ ಮಕ್ಕಳು ಕನ್ಫ್ಯೂಸ್ : ಇದು ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ಸಮಿತಿಯ ಯಡವಟ್ಟು

spot_img
- Advertisement -
- Advertisement -

ಬೆಂಗಳೂರು :  ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿನ್ನೆಯಷ್ಟೇ ಸರ್ಕಾರ ಸಮಿತಿಯನ್ನು ವಿಸರ್ಜಿಸಿದೆ.

ಈ ನಡುವೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಯಡವಟ್ಟೊಂದು ಬಯಲಾಗಿದೆ. ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಯಡವಟ್ಟು ಮಾಡಿದೆ.

ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ. ಅಲ್ಲದೆ 4ನೇ ತರಗತಿಯ ಸವಿ ಕನ್ನಡ ಪುಸ್ತಕದಲ್ಲಿಯೂ ಇದೇ ಪದ್ಯ ಸೇರಿಸಲಾಗಿದ್ದು, ಪಾಠ ಮಾಡುವ ಶಿಕ್ಷಕರಿಗೂ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಕ್ಕಳಲ್ಲೂ ಗೊಂದಲ ಮೂಡಿಸಿದೆ.

- Advertisement -
spot_img

Latest News

error: Content is protected !!