Wednesday, April 16, 2025
HomeUncategorizedಬಂಟ್ವಾಳ; ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಹಿನ್ನೆಲೆ ತೀರ್ಥಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು

ಬಂಟ್ವಾಳ; ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಹಿನ್ನೆಲೆ ತೀರ್ಥಸ್ನಾನ ಮಾಡಿ ಪುನೀತರಾದ ಸಾವಿರಾರು ಭಕ್ತರು

spot_img
- Advertisement -
- Advertisement -

ಬಂಟ್ವಾಳ; ಕಾರಿಂಜೇಶ್ವರ ದೇವಸ್ಥಾನದಲ್ಲಿ  ಇಂದು ಆಟಿ ಅಮಾವಾಸ್ಯೆ ಹಿನ್ನೆಲೆ ತೀರ್ಥಸ್ನಾನ ಮಾಡಿ ಸಾವಿರಾರು ಭಕ್ತರು ಪುನೀತರಾದರು.

ಇಂದು ಭಾನುವಾರ ರಜಾ ದಿನವಾದ್ದರಿಂದ ಬಹುತೇಕ ಭಕ್ತರಿಗೆ ಆಗಮಿಸಲು ಅನುಕೂಲವಾಯಿತು. ಆಗಮಿಸಿದ ಭಕ್ತರು ಇಲ್ಲಿನ ಗದಾತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ಪಾರ್ವತೀ-ಪರಮೇಶ್ವರರನ್ನು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಆಟಿ ಅಮವಾಸ್ಯೆ ಸಂದರ್ಭದಲ್ಲಿ ನವದಂಪತಿ ಬಾಗಿನ ಅರ್ಪಿಸಿದರೆ ದಾಂಪತ್ಯ ಜೀವನ ಒಳಿತಾಗುವುದು ಮತ್ತು ತೀರ್ಥ ಸ್ನಾನದಿಂದ ಸರ್ವರೋಗ ಪರಿಹಾರ ಎಂಬ ಪ್ರತೀತಿ ಇರುವುದರಿಂದ ನವದಂಪತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆ ಸುಮಾರು 3 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸಿದ್ದರು.ಭಕ್ತರಿಗೆ ಹಾಲೆಯ ಕೆತ್ತೆ ಕಷಾಯ ವಿತರಣೆ ನಡೆಯಿತು.ವಿವಿಧ ತಂಡಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಡಿವೈಎಸ್‌ಪಿ ವಿಜಯೇಂದ್ರ ಪ್ರಸಾದ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಹಾಗೂ ಮತ್ತಿತರರು ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಸಮಿತಿ ಸದಸ್ಯರು, ಗ್ರಾಮಣಿಗಳು, ಸಿಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ಗ್ರಾಮಾಂತರ ಮತ್ತು ಪುಂಜಾಲಕಟ್ಟೆ ಪೊಲೀಸರು ಹಾಗೂ ಬಂಟ್ವಾಳ ಸಂಚಾರಿ ಪೊಲೀಸರು ಸಂಚಾರ ಸುವ್ಯವಸ್ಥೆಗೆ ಸಹಕರಿಸಿದರು.

- Advertisement -
spot_img

Latest News

error: Content is protected !!