Saturday, June 13, 2026
Homeತಾಜಾ ಸುದ್ದಿಕಂಠಪೂರ್ತಿ ಕುಡಿದು ತರಗತಿಯಲ್ಲಿ ಬಿದ್ದ ಶಿಕ್ಷಕಿ

ಕಂಠಪೂರ್ತಿ ಕುಡಿದು ತರಗತಿಯಲ್ಲಿ ಬಿದ್ದ ಶಿಕ್ಷಕಿ

- Advertisement -
- Advertisement -

ಛತ್ತೀಸ್ ಗಢ: ಕಂಠಪೂರ್ತಿ ಕುಡಿದು ಶಿಕ್ಷಕಿಯೋರ್ವಳು ತರಗತಿಯಲ್ಲಿ ಬಿದ್ದುಕೊಂಡಿರುವ ಘಟನೆ ಟಿಕಾಯತ್‌ಗಂಜ್‌ನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಶಿಕ್ಷಕಿಗೆ ಪ್ರಜ್ಞೆ ಇರಲಿಲ್ಲ. ಪ್ರಜ್ಞೆಯೇ ಇಲ್ಲದೆ ಬಿದ್ದುಕೊಂಡಿದ್ದು, ಮಕ್ಕಳು ಆರಾಮವಾಗಿ ಆಟವಾಡುತ್ತಿದ್ದರು.

ಇನ್ನು ದುರದೃಷ್ಟ ಎಂಬಂತೆ ಇದೇ ವೇಳೆ ಶಿಕ್ಷಣಾಧಿಕಾರಿ ಶಾಲೆಯ ಪರಿಶೀಲನೆಗಾಗಿ ಸ್ಥಳಕ್ಕೆ ಬಂದಿದ್ದಾರೆ. ಕುಡಿದು ತರಗತಿಯಲ್ಲಿ ಮಲಗಿದ್ದ ಶಿಕ್ಷಕಿಯನ್ನು ನೋಡಿ ದಂಗಾಗಿ ಹೋಗಿದ್ದಾರೆ.

ಮೊದಲು ಶಿಕ್ಷಣಾಧಿಕಾರಿ ಆಕೆಯ ಆರೋಗ್ಯ ಹದಗೆಟ್ಟಿರಬಹುದು ಎಂದುಕೊಂಡಿದ್ದರು ಆದರೆ ಮಕ್ಕಳು ಈಕೆ ದಿನಾ‌ ಕುಡಿದು ಬರುವ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ.

ಶಿಕ್ಷಕಿಯ ಸ್ಥಿತಿಯನ್ನು ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಎಸ್ಪಿಗೆ ಮಾಹಿತಿ ನೀಡಿದ್ದು, ಶಿಕ್ಷಕಿಯ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

- Advertisement -

Latest News

error: Content is protected !!