Thursday, June 4, 2026
Homeತಾಜಾ ಸುದ್ದಿಲಾಕ್ ಡೌನ್ ವೇಳೆ ಎರಡು ಮದುವೆಯಾದ ಶಿಕ್ಷಕ : ನಾಲ್ಕು ಹೆಂಡ್ತಿಯರ ಮುದ್ದಿನ ಗಂಡ ಸಿಕ್ಕಿ...

ಲಾಕ್ ಡೌನ್ ವೇಳೆ ಎರಡು ಮದುವೆಯಾದ ಶಿಕ್ಷಕ : ನಾಲ್ಕು ಹೆಂಡ್ತಿಯರ ಮುದ್ದಿನ ಗಂಡ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?

- Advertisement -
- Advertisement -

ಒಡಿಶಾ: ಇಲ್ಲಿನ  ಕಟಕ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಬರೋಬ್ಬರಿ ನಾಲ್ಕು ಮದುವೆಯಾಗಿದ್ದು ಅತನನ್ನು ಬಂಧಿಸಲಾಗಿದೆ. ವಿಚ್ಛೇದನ ನೀಡದೆ ನಾಲ್ವರು ಮಹಿಳೆಯರನ್ನು ಮದುವೆಯಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಅಂದ್ಹಗೆ 9 ತಿಂಗಳ ಲಾಕ್ಡೌನ್ ಸಮಯದಲ್ಲಿ ಶಿಕ್ಷಕ ಎರಡು ಬಾರಿ ಮದುವೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕಟಕ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ 45 ವರ್ಷದ ವ್ಯಕ್ತಿ ವಿವಿಧ ಸಂದರ್ಭದಲ್ಲಿ ನಾಲ್ವರನ್ನು ಮದುವೆಯಾಗಿದ್ದಾನೆ. ಆತನ ಮೊದಲ ಮತ್ತು ಎರಡನೇ ಪತ್ನಿಯರು ಒಡಿಶಾದ ಕಟಕ್ ನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಶಿಕ್ಷಕನನ್ನು ಬಂಧಿಸಲಾಗಿದೆ.

 ಪೋಲಿಸ್ ಇನ್ಸ್ಪೆಕ್ಟರ್ ಅನುಸೂಯಾ ನಾಯಕ್ ನೀಡಿರುವ ಮಾಹಿತಿಯಂತೆ, 2001 ರಲ್ಲಿ ಶಿಕ್ಷಕ ಮೊದಲ ಬಾರಿಗೆ ಮದುವೆಯಾಗಿದ್ದಾನೆ. 8 ತಿಂಗಳ ನಂತರ ಪತ್ನಿಗೆ ವಿಚ್ಛೇದನ ನೀಡದೆ ಮರು ಮದುವೆಯಾಗಿದ್ದಾನೆ. ಎರಡನೇ ಪತ್ನಿಯೊಂದಿಗೆ ಮೂರು ವರ್ಷ ಕಾಲ ಜೊತೆಗಿದ್ದ ಆರೋಪಿ ಆಕೆಯಿಂದ ಪಡೆದ ಚಿನ್ನಾಭರಣಗಳೊಂದಿಗೆ ದೂರವಾಗಿದ್ದ. ಕಳೆದ ವರ್ಷ ಲಾಕ್ಡೌನ್ ಜಾರಿಯಾದ ಸಂದರ್ಭದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಮೊದಲ ಮತ್ತು ಎರಡನೇ ಪತ್ನಿ ಲಿಖಿತ ದೂರು ದಾಖಲಿಸಿದ ನಂತರ ಡೈವೋರ್ಸ್ ನೀಡದೇ ಮದುವೆಯಾಗಿದ್ದ ಆತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!