Thursday, June 4, 2026
Homeಕರಾವಳಿದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮಮ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ 49 ನೇಯ ಮಹಾ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮಮ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ 49 ನೇಯ ಮಹಾ ಸಭೆ

- Advertisement -
- Advertisement -

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮಮ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ 49 ನೇಯ ಮಹಾ ಸಭೆಯು ದಿನಾಂಕ 14/12/2022 ರಂದು ಊರ್ವ ಸ್ಟೋರ್ ಹತ್ತಿರ ಇರುವ ಡಾಕ್ಟರ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷರಾದ ದಿನೇಶ್ ಕುಂಪಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.       

ಪ್ರಧಾನ ಕಾರ್ಯದರ್ಶಿ ಆನಂದ . ಕೆ , ಉಪ ಅಧ್ಯಕ್ಷರುಗಳಾದ ನಾಗಪ್ಪ ಬಿ ಅಡ್ಯಾರ್ ದಿನೇಶ್ ಬಂಗೇರ.. ಹರೀಶ್ ಶೆಟ್ಟಿ ಮತ್ತು ಸಂಘಟನಾ ಕಾರ್ಯದರ್ಶಿಗಳು. ಹಾಗೂ ಕಾರ್ಯಾಧ್ಯಕ್ಷರಾದ ಪ್ರಮೋದ್ ಕುಮಾರ್ ಉಳ್ಳಾಲ್. ಉಪಸ್ಥಿತರಿದ್ದರು.ಸಭೆಯಲ್ಲಿ ಸಂಘದ ಸದಸ್ಯರ ಸಮಸ್ಯೆಗಳು. ಮತ್ತು ಸಂಘದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ತಂದು ಅಧ್ಯಕ್ಷರು ಸರಿಯಾದ ರೀತಿಯಲ್ಲಿ ಉತ್ತರಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ 2023-24 ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಈ ಕೆಳಗಂಡಂತೆ ಸರ್ವಾನು ಮತದಿಂದ ಆರಿಸಲಾಯಿತು. ಗೌರವ ಅಧ್ಯಕ್ಷರಾಗಿ ದಿನೇಶ್ ಕುಂಪಲ, ಅಧ್ಯಕ್ಷರಾಗಿ ಆನಂದ್ . ಕೆ ಉಪಾಧ್ಯಕ್ಷರಾಗಿ ಅಬೆಲ್ ಡಿಸೋಜಾ, ಹರೀಶ್ ಶೆಟ್ಟಿ, ನಾಗಪ್ಪ ಅಡ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಕಮಲಾಕ್ಷ ಎಂ, ಸಹ ಕಾರ್ಯದರ್ಶಿಯಾಗಿ ಲೋಕೇಶ್ ಕಶೆ ಕೋಡಿ , ಶುಭಕರ ಶೆಟ್ಟಿ.. ಅಬ್ದುಲ್ ಲತಿಫ್, ಸಂಘಟನಾ ಕಾರ್ಯದರ್ಶಿಯಾಗಿ ಉದಯಕುಮಾರ್, ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂಜಯ ಕೋಟ್ಯಾನ್ ಎಕ್ಕೂರು. ಖಜಾಂಜಿಯಾಗಿ ಸುರೇಶ್ ಸಾಲಿಯಾನ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯ ಕೊನೆಯಲ್ಲಿ ಆನಂದ್ ಕೆ ಅವರು  ಕಾರ್ಯಕ್ರಮ ಸಂಯೋಜಿಸಿ ವಂದನಾರ್ಪಣೆ ಗೈದು,  ಸಭೆಯನ್ನು ಮುಕ್ತಾಯ ಗೊಳಿಸಿದರು. ಇದೇ ವೇಳೆ ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಕುಂಪಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು

- Advertisement -

Latest News

error: Content is protected !!