Tuesday, May 21, 2024
Homeಕರಾವಳಿಉಡುಪಿಸ್ಟೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿ ಅವಧಿ ವಿಸ್ತರಣೆ: ಖಾಸಗಿ ಬಸ್ ಮಾಲೀಕರ...

ಸ್ಟೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿ ಅವಧಿ ವಿಸ್ತರಣೆ: ಖಾಸಗಿ ಬಸ್ ಮಾಲೀಕರ ನೆರವಿಗೆ ಬಂದ ಸರ್ಕಾರ

spot_img
- Advertisement -
- Advertisement -

ಬೆಂಗಳೂರು: ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ರಾಜ್ಯ ಸರ್ಕಾರ ಒಂದು ತಿಂಗಳ ಕಾಲಾವಕಾಶ ನೀಡಿದೆ. ಸಾರಿಗೆ ಸಚಿವ ಬಿ. ಶ್ರೀರಾಮುಲು ಟ್ವಿಟರ್ ಮೂಲಕ ಈ ಮಾಹಿತಿ ನೀಡಿದ್ದಾರೆ.

ಆಗಸ್ಟ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯ ಪಾವತಿ ಅವಧಿಯನ್ನು ಸೆಪ್ಟೆಂಬರ್ 15 ರವರೆಗೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆ ಅಕ್ಟೊಬರ್ 15 ರವರೆಗೆ ದಂಡ ರಹಿತವಾಗಿ ಪಾವತಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.

ಇದರಿಂದ ರಾಜ್ಯದಲ್ಲಿ ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲವಾಗಲಿದೆ. ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳು
ಸಾರಿಗೆ ಸಚಿವ ಶ್ರೀರಾಮುಲು ಭೇಟಿ ಮಾಡಿ ಮನವಿ ಮಾಡಿದ್ದವು.

ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಕೂಡಾ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅವಧಿ ವಿಸ್ತರಣೆ ಮಾಡಿದೆ.

- Advertisement -
spot_img

Latest News

error: Content is protected !!