Wednesday, May 15, 2024
HomeWorldʼIPL-2022ʼರ ಶೀರ್ಷಿಕೆ ಪ್ರಾಯೋಜಕತ್ವ ಗೆದ್ದ ʼಟಾಟಾ ಗ್ರೂಪ್ʼ

ʼIPL-2022ʼರ ಶೀರ್ಷಿಕೆ ಪ್ರಾಯೋಜಕತ್ವ ಗೆದ್ದ ʼಟಾಟಾ ಗ್ರೂಪ್ʼ

spot_img
- Advertisement -
- Advertisement -

ನವದೆಹಲಿ: ಐಪಿಎಲ್‌ ಮುಖ್ಯ (ಟೈಟಲ್) ಪ್ರಾಯೋಜಕತ್ವವನ್ನು ಭಾರತ ಮೂಲದ ‘ಟಾಟಾ ಗ್ರೂಪ್’ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೇರ್ಮನ್ ಬ್ರಿಜೇಶ್ ಪಟೇಲ್ ಅವರು, ಮುಂಬರುವ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಟಾಟಾ ಗ್ರೂಪ್ ಆಯ್ಕೆಯಾಗಿದೆ ಎಂದು ಇಂದು (ಮಂಗಳವಾರ) ದೃಢಪಡಿಸಿದ್ದಾರೆ.

ಈ ಹಿಂದೆ ಟೂರ್ನಿ ಪ್ರಾಯೋಜಕತ್ವ ಚೀನಾ ಮೂಲದ ಮೊಬೈಲ್ ಸಂಸ್ಥೆ ವಿವೋ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವ ಬಿಡ್ ಗೆದ್ದಿದೆ. ಇನ್ನು ವಿವೋ ಐಪಿಎಲ್ ಲೀಗ್‌ನೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಇನ್ನೂ ಎರಡು ವರ್ಷಗಳ ಅವಧಿ ಉಳಿದಿದ್ದು, ಇದರ ಪರಿಣಾಮವಾಗಿ, ಈ ಅವಧಿಯಲ್ಲಿ, ಟಾಟಾ ಮುಖ್ಯ ಪ್ರಾಯೋಜಕರಾಗಿ ಉಳಿಯುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!