Friday, May 17, 2024
Homeಕರಾವಳಿಉಡುಪಿಉಡುಪಿ: ಕೋಡಿ ಕಡಲ ತೀರದಲ್ಲಿ ಟಾರ್‌ ಚೆಂಡುಗಳು ಪತ್ತೆ: ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ಆತಂಕ ವ್ಯಕ್ತ

ಉಡುಪಿ: ಕೋಡಿ ಕಡಲ ತೀರದಲ್ಲಿ ಟಾರ್‌ ಚೆಂಡುಗಳು ಪತ್ತೆ: ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ಆತಂಕ ವ್ಯಕ್ತ

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಕಡಲತೀರದಲ್ಲಿ ಪ್ರದೇಶಗಲ್ಲಿ ಟಾರ್ ಚೆಂಡುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗೆ ಸ್ಥಳೀಯರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಟಾರ್ ಬಾಲ್ ಗಳಿಂದ ಸಮುದ್ರದ ನೀರು ಎಣ್ಣೆ ಮಯವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವೃತ್ತಿಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಹಾಗೂ ಪರಿಸರ ಹೋರಾಟಗಾರನಾಗಿರುವ ಡಾ.ದುರ್ಗಾಪ್ರಸಾದ್ ಹೆಗಡೆ ಅವರು ಮಾತನಾಡಿ, ಕೋಡಿ ಕಡಲತೀರದಲ್ಲಿ ಸಮುದ್ರದ ನೀರು ಎಣ್ಣೆ ಮಿಶ್ರಿತವಾಗಿರುವುದು ಆತಂಕದ ವಿಚಾರವಾಗಿದೆ. ಬೀಚ್‌ಗೆ ಭೇಟಿ ನೀಡುವ ಕೆಲವು ಪ್ರವಾಸಿಗರಲ್ಲಿ ಚರ್ಮದ ಸಮಸ್ಯೆ ಮತ್ತು ತುರಿಕೆ ಅನುಭವಿಸುತ್ತಿದ್ದಾರೆ. ಇದರಿಂದ ಸಮುದ್ರ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!