Saturday, April 20, 2024
Homeಇತರಅಂಧ ಮಹಿಳಾ ಫುಟ್‌ಬಾಲ್ ಆಟಗಾರರಿಗೆ ತರಬೇತಿ; ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಸಜ್ಜಾಗುತ್ತಿದೆ  ತಮೋಘ್ನ ಬ್ಲೈಂಡ್ ಸಂಸ್ಥೆ.

ಅಂಧ ಮಹಿಳಾ ಫುಟ್‌ಬಾಲ್ ಆಟಗಾರರಿಗೆ ತರಬೇತಿ; ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಸಜ್ಜಾಗುತ್ತಿದೆ  ತಮೋಘ್ನ ಬ್ಲೈಂಡ್ ಸಂಸ್ಥೆ.

spot_img
- Advertisement -
- Advertisement -

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಪುರುಷ ಅಂಧರ ಫುಟ್‌ಬಾಲ್‌ನಲ್ಲಿ ಗೆಲುವು ಸಾಧಿಸಲು ಕಾರಣವಾಗಿದ್ದ ಸಂಸ್ಥೆಯು ಇದೀಗ ಮತ್ತೊಂದು ಸಾಧನೆಗೆ ಹೆಜ್ಜೆ ಹಾಕುತ್ತಿದೆ.

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫುಟ್‌ಬಾಲ್ ಗೌಂಡ್‌ನಲ್ಲಿ ತಮೋಘ್ನ ಬ್ಲೈಂಡ್ ಫುಟ್‌ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯು  ರಾಷ್ಟ್ರೀಯ ಮಟ್ಟದ ಮಹಿಳಾ ಫುಟ್‌ಬಾಲ್ ಆಟಗಾರರಿಗೆ ತರಬೇತಿಯನ್ನು ಶುರು ಮಾಡಿದೆ.

ಈ ಸಂಸ್ಥೆಯ ಮುಖ್ಯ ಉದ್ದೇಶ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವಂತೆ ಮಾಡುವುದಾಗಿದೆ. ಕಳೆದ ವರ್ಷ ಅಂಧ ಪುರುಷರ ಫುಟ್‌ಬಾಲ್ ಚಾಂಪಿಯನ್ ಶಿಪ್ ಕಪ್ ಗೆದ್ದಿದ್ದು, ಈ ಬಾರಿ ಮಹಿಳಾ ಆಟಗಾರ್ತಿಯರಿಗೆ ಈ ಅವಕಾಶ ಸಿಕ್ಕಿದ್ದು ಮಹಿಳಾ ಆಟಗಾರ್ತಿಯರು ಟ್ರೈನಿಂಗ್ ಪಡೆಯುತ್ತಿದ್ದಾರೆ.


ತಮೋಘ್ನ ಬ್ಲೈಂಡ್  ಫುಟ್‌ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆ ಮಾಡುತ್ತಿರುವಂತಹ ಕೆಲಸಕ್ಕೆ ಯಾವುದೇ ಇತರೆ ಸಂಸ್ಥೆಗಳು ಅಥವಾ ಸರ್ಕಾರ ನೆರವಾಗುತ್ತಿಲ್ಲ. ಇದೀಗ ರಾಷ್ಟ್ರೀಯ ಮಟ್ಟದ ಅಂಧರ ಪಂದ್ಯಾವಳಿಗಳನ್ನು ಆಯೋಜಿಸಲು ನಿರ್ಧರಿಸಿದ್ದು, ಯಾವುದೇ ಸಹಾಯ ಹಸ್ತವಿಲ್ಲದೆ ನಮ್ಮ ಖರ್ಚುವೆಚ್ಚಗಳನ್ನು ಈ ಸಂಸ್ಥೆಯೇ ಬರಿಸುತ್ತಿದೆ. ಈ ಬಾರಿಯೂ ಸಹ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಅನ್ನು ನಾವು ಪಡೆಯುತ್ತೇವೆ ಎಂದು ಕ್ರೀಡಾಪಟುಗಳು ಭರವಸೆ ವ್ಯಕ್ತಪಡಿಸಿದರು.

- Advertisement -
spot_img

Latest News

error: Content is protected !!