Monday, May 20, 2024
Homeಪ್ರಮುಖ-ಸುದ್ದಿತಮಿಳಿನ ಖ್ಯಾತ ನಟ ಹಾಗೂ ಅವರ ತಂದೆಗೆ ಅಂಟಿದ ಕೊರೊನಾ ಸೋಂಕು

ತಮಿಳಿನ ಖ್ಯಾತ ನಟ ಹಾಗೂ ಅವರ ತಂದೆಗೆ ಅಂಟಿದ ಕೊರೊನಾ ಸೋಂಕು

spot_img
- Advertisement -
- Advertisement -

ಅಮಿತಾಬ್​ ಬಚ್ಚನ್​, ಅಭಿಷೇಕ್ ಬಚ್ಚನ್​, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಳಿಗೂ ಕರೊನಾ ಸೋಂಕು ತಗುಲಿತ್ತು. ಅದಾದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಧ್ರುವ ಸರ್ಜಾ ಮತ್ತು ತ್ನಿಗೂ ಕರೊನಾ ಇರುವುದು ದೃಢಪಟ್ಟಿತ್ತು. ಇದೀಗ ಪಕ್ಕದ ಕಾಲಿವುಡ್​ನಿಂದಲೂ ಕರೊನಾ ಕುರಿತು ಅಪ್​ಡೇಟ್ ಮಾಹಿತಿ ಹೊರಬಿದ್ದಿದೆ.

ಕಾಲಿವುಡ್​ನ ಸ್ಟಾರ್​ ನಟ ವಿಶಾಲ್​ ಮತ್ತು ಜಿಕೆ ರೆಡ್ಡಿ ಅವರಿಗೂ ಕರೊನಾ ಪಾಸಿಟಿವ್​ ಇರುವುದು ವರದಿಯಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಟ್ವಿಟರ್​ನಲ್ಲಿ ಈ ವಿಚಾರವನ್ನು ಹೇಳಿಕೊಂಡಿರುವ ವಿಶಾಲ್​, ‘ಅಪ್ಪನಿಗೆ ಕರೊನಾ ಪಾಸಿಟಿವ್​ ಇರುವುದು ಖಚಿತವಾಗಿದೆ. ಅವರೊಂದಿಗಿದ್ದ ನನಗೂ ಜ್ವರ, ನೆಗಡಿ, ಕೆಮ್ಮು ಶುರುವಾಗಿದೆ. ಅದೇ ರೀತಿ ನನ್ನ ಮ್ಯಾನೇಜರ್​ಗೂ ಇದೇ ಸಮಸ್ಯೆ ಎದುರಾಗಿದೆ’ ಎಂದು ಹೇಳಿಕೊಂಡಿದ್ದಾರೆ.

ಇನ್ನು ಮನೆಯಲ್ಲಿಯೇ ಆಯುರ್ವೇದಿಕ್​ ಔಷಧಿಯ ಮೊರೆ ಹೋಗಿರುವ ಕುಟುಂಬ, ಕ್ವಾರಂಟೈನ್​ ಆಗಿದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಚೆನ್ನಾಗಿದ್ದೇವೆ ಎಂದೂ ಟ್ವಿಟರ್​ನಲ್ಲಿ ಸಂದೇಶ ರವಾನಿಸಿದ್ದಾರೆ. ಇತ್ತೀಚೆಗಷ್ಟೇ ವಿಶಾಲ್​ ಫಿಲಂ ಫ್ಯಾಕ್ಟರಿಯ ಮಹಿಳಾ ಉದ್ಯೋಗಿಯೊಬ್ಬರು 40 ಲಕ್ಷ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಮನೆ ಖರೀದಿಸಿದ್ದರು. ಆ ವಿಚಾರವಾಗಿ ಮಹಿಳಾ ಉದ್ಯೊಗಿ ವಿರುದ್ಧ ದೂರನ್ನೂ ನೀಡಿದ್ದರು.

- Advertisement -
spot_img

Latest News

error: Content is protected !!