Saturday, June 6, 2026
Homeತಾಜಾ ಸುದ್ದಿಕೌಟುಂಬಿಕ ಕಲಹ : ಕಾಲಿವುಡ್ ನ ಖ್ಯಾತ ನಟ ನೇಣಿಗೆ ಶರಣು

ಕೌಟುಂಬಿಕ ಕಲಹ : ಕಾಲಿವುಡ್ ನ ಖ್ಯಾತ ನಟ ನೇಣಿಗೆ ಶರಣು

- Advertisement -
- Advertisement -

ಚೆನ್ನೈ: 2012ರಲ್ಲಿ ಬಿಡುಗಡೆಯಾಗಿದ್ದ ಮರಿನಾ ಸಿನಿಮಾ ಖ್ಯಾತಿಯ ನಟ ಥೆನ್ನರಸು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ನಟ ಸೂಸೈಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವಕಾರ್ತಿಕೇಯನ್ ಮತ್ತು ಓವಿಯಾ ನಟನೆಯ ಮರಿನಾ ಸಿನಿಮಾ 2012ರಲ್ಲಿ ಸಖತ್ ಸದ್ದು ಮಾಡಿತ್ತು. ಮರಿನಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಥೆನ್ನರಸು ತಮ್ಮ ಸಹಜ ನಟನೆಯ ಮೂಲಕ ನೋಡುಗರಿಗೆ ಇಷ್ಟವಾಗಿದ್ದರು. ಮರಿನಾ ಬಳಿಕ ತಮಿಳಿನ ಹಲವು ಸಿನಿಮಾಗಳಲ್ಲಿ ಥೆನ್ನರಸು ನಟಿಸಿ ಸೈ ಅನ್ನಿಸಿಕೊಂಡಿದ್ದರು.

ಮೂರು ವರ್ಷಗಳ ಹಿಂದೆ ಥೆನ್ನರಸು ಪ್ರೀತಿಸಿದ ಯುವತಿಯನ್ನ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಸಹ ಇದೆ. ಮದ್ಯದ ದಾಸನಾಗಿದ್ದ ಥೆನ್ನರಸು ಮನೆಯಲ್ಲಿ ಪತ್ನಿ ಜೊತೆ ಸದಾ ಜಗಳವಾಡುತ್ತಿದ್ದರು. ಇಂದು ಸಹ ಪತಿ-ಪತ್ನಿ ನಡುವೆ ವಾಕ್ಸಮರ ನಡೆದಿದೆ. ಕೊನೆಗೆ ಕೋಣೆ ಸೇರಿದ ಥೆನ್ನರಸು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರೋ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಟರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ನಟನ ನಿಧನಕ್ಕೆ ಕಾಲಿವುಡ್ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.        

- Advertisement -

Latest News

error: Content is protected !!