Monday, June 29, 2026
Homeತಾಜಾ ಸುದ್ದಿರಾಗಿಣಿ ಹಾಗೂ ಸಂಜನಾ ಮೊಬೈಲ್ ನಲ್ಲಿ ಸಿಕ್ತು ಮತ್ತೊಂದು ದಂಧೆಯ ಮಹಾನ್ ಸುಳಿವು...

ರಾಗಿಣಿ ಹಾಗೂ ಸಂಜನಾ ಮೊಬೈಲ್ ನಲ್ಲಿ ಸಿಕ್ತು ಮತ್ತೊಂದು ದಂಧೆಯ ಮಹಾನ್ ಸುಳಿವು…

- Advertisement -
- Advertisement -

ಬೆಂಗಳೂರು : ಡ್ರಗ್ಸ್ ದಂಧೆ ವಿಚಾರದಲ್ಲಿ ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರ ಸೇರಿ, ಮುದ್ದೆ ಮುರಿಯುತ್ತಿದ್ದಾರೆ. ಸದ್ಯಕ್ಕಂತೂ ಅವರಿಗೆ ಬಿಡುಗಡೆ ಭಾಗ್ಯವಿಲ್ಲ. ಇದೀಗ ಅವರಿಬ್ಬರ ಮೊಬೈಲ್ ನಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.

ಯೆಸ್… ಡ್ರಗ್ಸ್ ಜಾಲ ಬೇಧಿಸುತ್ತಿರುವ ಪೊಲೀಸರಿಗೆ ಮತ್ತೊಂದು ಭಯಾನಕ ದಂಧೆಯ ಮಾಹಿತಿ ಸಿಕ್ಕಿದೆ. ಡ್ರಗ್ಸ್ ಕೇಸ್‍ನಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಬಂಧಿತ ಆರೋಪಿಗಳ ಮೊಬೈಲ್‍ನಲ್ಲಿ ಸೆಕ್ಸ್ ದಂಧೆ ಸಾಕ್ಷ್ಯ ದೊರಕಿದ್ಯಂತೆ. ಸೆಕ್ಸ್ ದಂಧೆಗಾಗಿಯೇ ಆರೋಪಿಗಳು ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿದ್ದರು. ಆದರೆ ಡ್ರಗ್ಸ್ ಕೇಸ್ ಬಯಲಾಗ್ತಿದ್ದಂತೆ ವಾಟ್ಸಾಪ್ ಗ್ರೂಪ್‍ನ್ನೇ ಡಿಲೀಟ್ ಮಾಡಿದ್ದರು. ಬಂಧಿತ ನಟಿಯರ ಮೊಬೈಲ್‍ನಲ್ಲಿಯೂ ಸಾಕ್ಷ್ಯ ಸಿಕ್ಕಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೆಲ್ಲಾ ಗಮನಿಸಿದ್ರೆ ನಶೆಯ ರಾಣಿಯರಿಗೆ ಸದ್ದಕ್ಕಂತೂ ಜಾಮೀನು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನೊಂದಷ್ಟು ಪ್ರಕರಣಗಳು ಬಯಲಾಗುವ ಎಲ್ಲಾ ಸೂಚನೆಗಳು ಸಿಗುತ್ತಿವೆ.

- Advertisement -

Latest News

error: Content is protected !!