Wednesday, April 16, 2025
HomeUncategorizedಬಳಂಜದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾ ಕೂಟ; ವಿದ್ಯಾರ್ಥಿಗಳು ನಿರಂತರ ಸಾಧನೆಯಲ್ಲಿ ತೊಡಗಬೇಕು: ಸುಮಂತ್...

ಬಳಂಜದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾ ಕೂಟ; ವಿದ್ಯಾರ್ಥಿಗಳು ನಿರಂತರ ಸಾಧನೆಯಲ್ಲಿ ತೊಡಗಬೇಕು: ಸುಮಂತ್ ಕುಮಾರ್ ಜೈನ್           

spot_img
- Advertisement -
- Advertisement -

ಬೆಳ್ತಂಗಡಿ: ಶ್ರೇಷ್ಠ ಸಾಧಕರು ನಿರಂತರ ಸಾಧನೆಯಿಂದ ಸಾಧಕರಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಕಲಿಕೆ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರ ಸಾಧನೆ ಮಾಡಬೇಕು, ಆಗ ಮಾತ್ರ ಶ್ರೇಷ್ಟ ವ್ಯಕ್ತಿಗಳಾಗಲು ಸಾದ್ಯ ಎಂದು ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.             

ಅವರು ಶನಿವಾರ  ಬಳಂಜ ಸ.ಉ ಪ್ರಾಥಮಿಕ, ಪ್ರೌಢಶಾಲೆಯಲ್ಲಿ  ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿ ಬೆಳ್ತಂಗಡಿ, ಶಾಲಾಬಿವೃದ್ದಿ ,ಮೇಲುಸ್ತುವಾರಿ ಸಮಿತಿ ಬಳಂಜ, ತಾ ಮಟ್ಟದ ಕ್ರೀಡಾಕೂಟ ಸಂಘಟನಾ ಸಮಿತಿ ಬಳಂಜ, ಶಿಕ್ಷಣ ಟ್ರಸ್ಟ್ ಬಳಂಜ, ಅಮ್ರುತಮಹೋತ್ಸವ ಸಮಿತಿ,ಹಳೆ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕರ,ಬಾಲಕಿಯರ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ದ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು ಪಠ್ಯ ಶಿಕ್ಷಣದ ಜೊತೆ ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದರು.                                        

ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ, ಕ್ರೀಡಾ ಪ್ರೋತ್ಸಾಹ ಸಿಗಬೇಕು ಎಂಬುದೇ ಬದುಕು ಕಟ್ಟೋಣ ತಂಡದ ಉದ್ದೇಶ.ಇದುವರೆಗೆ ನೂರಾರು ವಿದ್ಯಾರ್ಥಿಗಳು ಕ್ರೀಡಾ ಪ್ರೋತ್ಸಾಹ ನೀಡಿದ್ದು 5 ಸರಕಾರಿ ಶಾಲೆಗಳನ್ನು ನವೀಕರಣ ಮಾಡಲಾಗಿದೆ. ನಮ್ಮ ಜೊತೆ ಊರಿನವರು, ರೋಟರಿಯಂತಹ ಸಂಘ ಸಂಸ್ಥೆಗಳು ಕೈಜೋಡಿಸುತ್ತಿದೆ. ಬಳಂಜದಲ್ಲಿ ಸರಕಾರಿ ಶಾಲೆಯ ಬೆಳವಣಿಗೆಯ ಬಗ್ಗೆ ಊರಿನವರಿಗೆ ಚಿಂತನೆಯಿದ್ದು ಇದು ಮೆಚ್ಚುವಂತಹುದು. ಮುಂದಿನ ವರ್ಷದಲ್ಲಿ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಶಿಕ್ಷಕರಿಗಾಗಿ ದೊಡ್ಡ ಕಾರ್ಯಕ್ರಮವನ್ನು ಬದುಕು ಕಟ್ಟೋಣ ತಂಡದಿಂದ ಮಾಡಲಾಗುವುದು ಎಂದರು.            

ಕ್ಷೇತ್ರ ಶಿಕ್ಷಣಾದಿಕಾರಿ ತಾರಾಕೇಸರಿ ಮಾತನಾಡಿ ಸರಕಾರಿ ಶಾಲಾ ಮಕ್ಕಳ ಬೆಳವಣಿಗೆಗೆ ಊರವರ ಕೊಡುಗೆ ಅಗತ್ಯವಾಗಿದ್ದು ಇದು ಬಳಂಜದಲ್ಲಿ ಉತ್ತಮ ಸಹಕಾರ ಸಿಗುತ್ತಿದೆ ಎಂದರು. ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ಪ್ರಮೋದ್ ಕುಮಾರ್ ಜೈನ್ ವಹಿಸಿದ್ದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಕ್ರೀಡಾ ದ್ವಜಾರೋಹಣ ಮಾಡಿದರು. ವೇದಿಕೆಯಲ್ಲಿ ಬಳಂಜ ಪ್ರೌಢಶಾಲಾ ಅಬಿವ್ರುದ್ದಿ ಸಮಿತಿ ಉಪಾದ್ಯಕ್ಷ ವಸಂತ ಸಾಲಿಯಾನ್ , ಬಳಂಜ ಶಾಲಾ ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ ಕೆ, ಬಳಂಜ ಶಿಕ್ಷಣ ಟ್ರಸ್ಟ್  ಅಧ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ್  ಪೇರಂದಬೈಲ್,ಟ್ರಷ್ಟಿಗಳಾದ ರಾಕೇಶ್ ಹೆಗ್ಡೆ,ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಗತಿಪರ ಕ್ರುಷಿಕ ಸತೀಶ್ ರೈ ಬಾರ್ದಡ್ಕ, ಅಳದಂಗಡಿ ಸಿ ಎ ಬ್ಯಾಂಕ್ ನ ನಿರ್ದೇಶಕ ದಿನೇಶ್ ಪಿ.ಕೆ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್  ಪಿ ಕೋಟ್ಯಾನ್,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾದಿಕಾರಿ ಸುಜಯ,ನಿರಂಜನ್,ಅಖಿಲ್, ಮತ್ತಿತರರು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಸ್ವಾಗತಿಸಿ, ಪ್ರಾಥಮಿಕ  ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!