Sunday, June 7, 2026
Homeಕೊಡಗುತಲಕಾವೇರಿ ದೇಗುಲದ ಮೂಲ ಅರ್ಚಕ ಗೋಪಾಲಕೃಷ್ಣ ಆಚಾರ್ಯ ವಿಧಿವಶ

ತಲಕಾವೇರಿ ದೇಗುಲದ ಮೂಲ ಅರ್ಚಕ ಗೋಪಾಲಕೃಷ್ಣ ಆಚಾರ್ಯ ವಿಧಿವಶ

- Advertisement -
- Advertisement -

ಸುಳ್ಯ: ತಲಕಾವೇರಿ ದೇಗುಲದ ಮೂಲ ಅರ್ಚಕ ಗೋಪಾಲಕೃಷ್ಣ ಆಚಾರ್ಯ(82) ವಿಧಿವಶವಾಗಿದ್ದಾರೆ.ಗೋಪಾಲಕೃಷ್ಣ ಆಚಾರ್ಯ ಅವರು 1995 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಡೆಪ್ಯುಟಿ ತಹಶೀಲ್ದಾರಾಗಿ ನಿವೃತ್ತಿ ಹೊಂದಿದ್ದರು. ಇವರು ವಂಶ ಪಾರಂಪರ್ಯವಾಗಿ ತಲಕಾವೇರಿ ದೇವಾಲಯದಲ್ಲಿ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ  ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿ, ಕೊಡುಗೈದಾನಿಯಾಗಿದ್ದರು.

ಮೃತರು ಪತ್ನಿ ಪದ್ಮಾವತಿ, ಪುತ್ರ ಪುತ್ತೂರು ಶಾಖೆಯ ಟಾಟಾ ಅರವಿಂದ ಮೋಟರ್ಸ್‌ ಕಂಪೆನಿಯ ಸರ್ವಿಸ್‌ ಮೆನೇಜರ್‌ ಕೃಷ್ಣ ಪ್ರಸಾದ್‌ ಆಚಾರ್ಯ, ವಿಟ್ಲ ಗ್ರಾಮೀಣ ಬ್ಯಾಂಕ್‌ ಪುತ್ತೂರು ಶಾಖೆಯ ವ್ಯವಸ್ಥಾಪಾಕಿ ಸವಿತಾ ನಾಗರಾಜ್, ಸಹಿತ ನಾಲ್ವರು ಪುತ್ರಿಯನ್ನು, ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ಸಂತಾಪ ಸೂಚಿಸಿದರು.

- Advertisement -

Latest News

error: Content is protected !!