Monday, June 8, 2026
Homeಕರಾವಳಿಉಡುಪಿಗಂಗೊಳ್ಳಿ: ಬಿಜೆಪಿ ಮಾನ ಮರ್ಯಾದೆಯನ್ನು ಬೀದಿ ಬೀದಿ, ಮನೆ ಮನೆಗೆ ಹೋಗಿ ತೆಗಿತೀನಿ: ಪ್ರಮೋದ್ ಮುತಾಲಿಕ್...

ಗಂಗೊಳ್ಳಿ: ಬಿಜೆಪಿ ಮಾನ ಮರ್ಯಾದೆಯನ್ನು ಬೀದಿ ಬೀದಿ, ಮನೆ ಮನೆಗೆ ಹೋಗಿ ತೆಗಿತೀನಿ: ಪ್ರಮೋದ್ ಮುತಾಲಿಕ್ ಗುಡುಗು

- Advertisement -
- Advertisement -

ಗಂಗೊಳ್ಳಿ: ಕಲಬುರಗಿ ಗಣೇಶೋತ್ಸವಕ್ಕೆ ತಮಗೆ ಪ್ರವೇಶ ನಿಷೇಧ ವಿಧಿಸಿರುವ ವಿಚಾರವಾಗಿ ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲಾಧಿಕಾರಿಯ ಆದೇಶವಲ್ಲ, ಸರ್ಕಾರದ ಆದೇಶ. ಸರ್ಕಾರ ಅಂದ್ರೆ ಬಿಜೆಪಿ. ನನಗೆ ಪದೇಪದೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದು ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹಾಗೇ ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ. ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ? ಮುಸ್ಲಿಮರನ್ನು, ಶತ್ರುಗಳನ್ನು, ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ? ಹಿಂದುಗಳ ಕೊಲೆಯಾಗುವಾಗ ಸಂಘಟನೆಗಳಿಗೆ ನೀವು ಬಲ ತುಂಬಬೇಕು. ನ್ಯಾಯಾಲಯದಿಂದ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿಸ್ತೀನಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದರು.

- Advertisement -

Latest News

error: Content is protected !!