Sunday, June 7, 2026
Homeಕರಾವಳಿಮಂಗಳೂರು: ಯಾರು ಭಯ, ಗೊಂದಲದ ವಾತಾವರಣ ಸೃಷ್ಟಿ ಮಾಡ್ತಾರೋ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ :...

ಮಂಗಳೂರು: ಯಾರು ಭಯ, ಗೊಂದಲದ ವಾತಾವರಣ ಸೃಷ್ಟಿ ಮಾಡ್ತಾರೋ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ : ಯು.ಟಿ. ಖಾದರ್

- Advertisement -
- Advertisement -

ಮಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಕಾರ್ ಸ್ಟ್ರೀಟ್ ಕಾಲೇಜಿನಲ್ಲಿ ನಡೆದ ಘಟನೆಯನ್ನು ಮಾಜಿ ಸಚಿವ ಹಾಗೂ ವಿಧಾನ ಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಖಂಡಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಈ ರೀತಿ ಅಗೌರವ ತೋರಿಸುವುದು ಸರಿಯಾ? ಎಂದು ಮಾಜಿ ಸಚಿವ ಖಾದರ್ ಪ್ರಶ್ನಿಸಿದ್ದಾರೆ. ಹುಡುಗರು ದಬ್ಬಾಳಿಕೆ ಮಾಡಿದಾಗ ಪ್ರಾಂಶುಪಾಲರು, ಆಡಳಿತ ಮಂಡಳಿ ತಕ್ಕ ಕ್ರಮ ತೆಗೆದುಕೊಳ್ಳಬೇಕು. ಯಾರು ಭಯ, ಗೊಂದಲದ ವಾತಾವರಣ ಸೃಷ್ಟಿ ಮಾಡ್ತಾರೋ, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ನಮಗೆ ಶಾಂತಿ, ಸೌಹಾರ್ದ ಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ ಸ್ಟೀಟ್ ಕಾಲೇಜಿನಲ್ಲಿ ನಡೆದ ಹಿಜಾಬ್ ಗಲಾಟೆ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಸತ್ಯಾಂಶ ಹೊರಗೆ ಹಾಕಲಿ ಎಂದು ಮಂಗಳೂರಿನಲ್ಲಿ ವಿಧಾನ ಸಭಾ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಹೇಳಿದ್ದಾರೆ.

- Advertisement -

Latest News

error: Content is protected !!