Monday, May 6, 2024
HomeWorldತಬ್ಲಿಘಿ ಜಮಾತ್ ಚಟುವಟಿಕೆಯನ್ನು ತನ್ನ ದೇಶದಲ್ಲಿ ನಿಷೇಧಿಸಿದೆ ಸೌದಿ ಅರೇಬಿಯ, ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಜನರಿಗೆ...

ತಬ್ಲಿಘಿ ಜಮಾತ್ ಚಟುವಟಿಕೆಯನ್ನು ತನ್ನ ದೇಶದಲ್ಲಿ ನಿಷೇಧಿಸಿದೆ ಸೌದಿ ಅರೇಬಿಯ, ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಜನರಿಗೆ ತಿಳಿ ಹೇಳುವಂತೆ ಸೂಚನೆ

spot_img
- Advertisement -
- Advertisement -

ನವದೆಹಲಿ: ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಸೌದಿ ಅರೇಬಿಯಾ ಸರಕಾರ ಸುನ್ನಿ ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾತ್ ಚಟುವಟಿಕೆಯನ್ನು ತನ್ನ ದೇಶದಲ್ಲಿ ನಿಷೇಧಿಸಿದೆ ಎಂದು ಟ್ವೀಟ್ ಮಾಡಿದೆ.

ಮುಂದಿನ ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧರ್ಮ ಗುರುಗಳು, ತಬ್ಲಿಘಿ ಜಮಾತ್‌ ಸಂಪರ್ಕ ಇಟ್ಟುಕೊಳ್ಳದಂತೆ ಜನರಿಗೆ ಎಚ್ಚರಿಕೆ ನೀಡಲು ಸೂಚಿಸಿದೆ.‌ ಯಾಕೆಂದರೆ ತಬ್ಲಿಘಿ ಜಮಾತ್ ಭಯೋತ್ಪಾದಕರ ನಂಟು ಹೊಂದಿದೆ. ಉಗ್ರವಾದದ ಬಾಗಿಲಲ್ಲಿ ನಿಂತಿರುವ ಸಂಘಟನೆಗಳಲ್ಲಿ ಇದೂ ಒಂದು ಎಂಬುದಾಗಿ ಹೇಳಿರುವ ಸಚಿವಾಲಯ.

ಈ ಸಮೂಹವು ಹಾದಿ ತಪ್ಪಿಸುವ ಘೋಷಣೆಗಳನ್ನು ಮಾಡುತ್ತಿವೆ. ದಾರಿ ತಪ್ಪಿಸುವ ಅಪಾಯಕಾರಿ ನಡೆಗಳು ಭಯೋತ್ಪಾದನೆಗೆ ಪ್ರವೇಶ ದ್ವಾರಗಳಾಗಿವೆ, ಅವರು ಏನೇ ಹೇಳಿಕೊಂಡರೂ, ಅವರು ಮಾಡುತ್ತಿರುವ ತಪ್ಪುಗಳನ್ನು ಉಲ್ಲೇಖಿಸಿ. ಅವರಿಂದ ಸಮಾಜಕ್ಕೆ ಮುಂದೆ ಆಗಲಿರುವ ಅಪಾಯಗಳ ಬಗ್ಗೆ ವಿವರವಾಗಿ ತಿಳಿಸುವಂತೆ ಮಸೀದಿ ಪ್ರಮುಖರಿಗೆ ಸೂಚನೆಯನ್ನು ನೀಡಿದೆ.‌

ಸೌದಿ ಅರೇಬಿಯಾದಲ್ಲಿ ತಬ್ಲಿಘಿ ಹಾಗೂ ದಾವಾ ಸೇರಿದಂತೆ ಪ್ರತ್ಯೇಕವಾದಿ ಗುಂಪುಗಳನ್ನು ನಿಷೇಧಿಸಲಾಗಿದೆ. ಮಸೀದಿಯಲ್ಲಿ ಪ್ರವಚನ ಮಾಡುವವರು ಈ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ನಿಷೇಧಿತ ಸಂಘಟನೆಗಳಲ್ಲಿ ಗುರುತಿಸದಂತೆ ಹೇಳಬೇಕು ಎಂದು ಸಚಿವಾಲಯ ಸೂಚನೆಯನ್ನು ಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!