- Advertisement -
- Advertisement -
ಲಕ್ನೋ : ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಲು ತಬ್ಲಿಘಿ ಜಮಾತ್ ಸದಸ್ಯರೇ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಕೊರೊನಾ ಸೋಂಕು ಹಬ್ಬಿಸುವಲ್ಲಿ ತಬ್ಲಿಘಿ ಜಮಾತ್ ಪಾತ್ರ ಅತ್ಯಂತ ಖಂಡನೀಯ. ಸೋಂಕು ದೇಹಕ್ಕೆ ತಾಗಿಸಿಕೊಳ್ಳುವುದು ಅಪರಾಧವಲ್ಲ. ಆದರೆ ಆ ರೋಗವನ್ನು ಬೇರೊಬ್ಬರಿಗೆ ಹರಡುವುದು ಖಂಡಿತವಾಗಿಯೂ ತಪ್ಪು, ತಬ್ಲಿಘಿ ಜಮಾತ್ ಗೆ ಸಂಬಂಧಪಟ್ಟವರು ಈ ಬಹುದೊಡ್ಡ ಅಪರಾಧವನ್ನು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಬ್ಲಿಘಿ ಸದಸ್ಯರು ಆರಂಭದಲ್ಲಿ ಮರೆಮಾಚದೆ ವೈರಸ್ ಹಬ್ಬುವುದನ್ನು ತಡೆದಿದ್ದರೆ ಖಂಡಿತವಾಗಿಯೂ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕೊರೊನಾ ಹರಡಲು ತಬ್ಲಿಘಿಗಳೇ ಕಾರಣ ಎಂದು ಸಿಎಂ ಯೋಗಿಆದಿತ್ಯನಾಥ್ ಆರೋಪಿಸಿದ್ದಾರೆ.
- Advertisement -