Thursday, April 18, 2024
Homeಕರಾವಳಿಶ್ರೀ ಕ್ಷೇತ್ರ ಹೊಂಬುಜ ಜೈನ ಮಠದಿಂದ ಬಸದಿಗಳ ಪುರೋಹಿತ ಕುಟುಂಬಗಳಿಗೆ ಆಹಾರ ವಸ್ತುಗಳ ಕೊಡುಗೆ

ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದಿಂದ ಬಸದಿಗಳ ಪುರೋಹಿತ ಕುಟುಂಬಗಳಿಗೆ ಆಹಾರ ವಸ್ತುಗಳ ಕೊಡುಗೆ

spot_img
- Advertisement -
- Advertisement -

ಬೆಳ್ತಂಗಡಿ; ದೇಶದೆಲ್ಲೆಡೆ ಮಹಾಮಾರಿ ಕೊರೋನಾ ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ಅನೇಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತಿದೆ. ಪೂಜೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಅರ್ಹ ಜೈನ ಬಸದಿಯ ಪುರೋಹಿತ ಕುಟುಂಬಗಳಿಗೆ ಶ್ರೀ ಕ್ಷೇತ್ರ ಹೊಂಬುಜ ಶ್ರೀ ಜೈನ ಮಠದ ಡಾ.‌ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಯವರ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಇಂದು ನಡೆಯಿತು.
ಭರತ್ ರಾಜ್ ಇಂದ್ರ ಕಾರ್ಕಳ ಇವರು ವಿತರಣೆಯ ನೇತೃತ್ವ ವಹಿಸಿದ್ದರು.
ಕರ್ನಾಟಕ ರಾಜ್ಯಾಧ್ಯಂತ 400 ರಷ್ಟು ಅರ್ಹ ಪುರೋಹಿತ ಕುಟುಂಬಗಳಿಗೆ ಈಗಾಗಲೇ ಕಿಟ್ಟ್ ವಿತರಣೆ ಮಾಡಲಾಗಿದ್ದು, ಇನ್ನುಳಿದ‌ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ನಾರಾವಿ, ಅಳದಂಗಡಿ, ಗುರುವಾಯನಕೆರೆ, ಬಂಗಾಡಿ ಸೇರಿದಂತೆ14 ಬಸದಿಗಳ 35 ಕುಟುಂಬಗಳಿಗೆ ತಲಾ 1 ಸಾವಿರ ರೂ.‌ಮೊತ್ತದ ಆಹಾರದ ಕಿಟ್ಟ್ ಹಾಗೂ 500 ರೂ.‌ನಗದು ವಿತರಿಸಲಾಯಿತು.

- Advertisement -
spot_img

Latest News

error: Content is protected !!