Friday, April 26, 2024
Homeತಾಜಾ ಸುದ್ದಿರಿಸಲ್ಟ್ ಉಲ್ಟಾ: 1622 ಮತಗಳಿಂದ ಗೆದ್ದಿದ್ದ ಪಶ್ಚಿಮ ಬಂಗಾಳದ 'ಸಿಎಂ ಮಮತಾ ಬ್ಯಾನರ್ಜಿಗೆ ಸೋಲು

ರಿಸಲ್ಟ್ ಉಲ್ಟಾ: 1622 ಮತಗಳಿಂದ ಗೆದ್ದಿದ್ದ ಪಶ್ಚಿಮ ಬಂಗಾಳದ ‘ಸಿಎಂ ಮಮತಾ ಬ್ಯಾನರ್ಜಿಗೆ ಸೋಲು

spot_img
- Advertisement -
- Advertisement -

ಕೊಲ್ಕೊತ್ತಾ : ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಿಎಂ ಮಮತಾ ಬ್ಯಾನರ್ಜಿಯವರು, ಸುವೇಂಧು ಅಧಿಕಾರಿ ವಿರುದ್ಧ 1622 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಈ ಮೊದಲು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು 1200 ಮತಗಳ ಅಂತರದಿಂದ ಬಿಜೆಪಿಯ ಸುವೇಂಧು ಅಧಿಕಾರಿ ವಿರುಧ್ದ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿತ್ತು.

ಇದೀಗ ಅಂತಿಮ ರೋಚಕ ಚುನಾವಣಾ ಫಲಿತಾಂಶಕ್ಕೆ ಬಿಗ್ ಟ್ವಿಸ್ಟ್ ಪಡೆದಿದ್ದು, ಚುನಾವಣಾ ಅಧಿಕಾರಿಗಳು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂಧು ಅಧಿಕಾರಿ ವಿರುದ್ಧ 1622 ಮತಗಳ ಅಂತರದಿಂದ ಸೋಲು ಕಂಡಿರುವುದಾಗಿ ಘೋಷಿಸಿದ್ದಾರೆ.

ಇಡೀ ರಾಜ್ಯವನ್ನು ಗೆದ್ದ ಮಮತಾ ಬ್ಯಾನರ್ಜಿಗೆ ನಂದಿಗ್ರಾಮದಲ್ಲಿ ಸೋಲಾಗಿದೆ. 292 ಸದಸ್ಯಬಲದ ಪಶ್ಚಿಮಬಂಗಾಳದಲ್ಲಿ ಟಿಎಂಸಿ 214, ಬಿಜೆಪಿ 77 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಆದರೆ ಟಿಎಂಸಿ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಿಷ್ಯ ಸುವೆಂದು ಅಧಿಕಾರಿ ವಿರುದ್ಧ 1622 ಮತಗಳಿಂದ ಸೋಲು ಕಂಡಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಸಿಎಂ ಮಮತಾ ಬ್ಯಾನರ್ಜಿ ಅವರು, ಈ ಮೊದಲು ಗೆಲುವು ಸಾಧಿಸಲಾಗಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ ಇದೀಗ ಚುನಾವಣಾ ಅಧಿಕಾರಿಗಳು ಸೋಲು ಕಂಡಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಚುನಾವಣೆ ಫಲಿತಾಂಶದ ಕುರಿತಂತೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!