Thursday, June 25, 2026
Homeಕರಾವಳಿಉಡುಪಿಉಡುಪಿ; ಕಾಪುವಿನ ಹೊಸ ಮಾರಿಗುಡಿಗೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

ಉಡುಪಿ; ಕಾಪುವಿನ ಹೊಸ ಮಾರಿಗುಡಿಗೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

- Advertisement -
- Advertisement -

ಉಡುಪಿ; ಕಾಪುವಿನ ಹೊಸ ಮಾರಿಗುಡಿಗೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ ನೀಡಿದ್ದಾರೆ.

ಪತ್ನಿ ದೇವಿಶಾ ಶೆಟ್ಟಿ ಜೊತೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಅವರಿಗೆ ಮಾರಿಗುಡಿ ವತಿಯಿಂದ ಭವ್ಯ ಸ್ವಾಗತ ದೊರೆಯಿತು. ಮೊನ್ನೆಯಷ್ಟೇ ಟಿ 20 ವಿಶ್ವಕಪ್ ನಲ್ಲಿ ಜಯಶಾಲಿಯಾದ ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಮಿಂಚಿದ್ದರು. ಫೈನಲ್ ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ದೇಶದ ಜನರ ವಿಶ್ವಕಪ್ ಕನಸನ್ನು ನನಸಾಗಿದ್ದರು.ಇಲ್ಲಿಗೆ ಆಗಮಿಸಿದ ಸ್ಟಾರ್ ಕ್ರಿಕೆಟರ್ ದಂಪತಿ ಮಾರಿಯಮ್ಮನ ದರ್ಶನ ಪಡೆದರು.

ಇನನು ಕಾಪು ಹೊಸ ಮಾರಿಗುಡಿ ನಿರ್ಮಾಣ ಹಂತದಲ್ಲಿದ್ದು ಭವ್ಯವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ ಕೂಡ ಜರುಗಲಿದೆ. ಭವ್ಯ ಮಾರಿಗುಡಿಯ ಕಾಮಗಾರಿ ವೀಕ್ಷಿಸಿದ ಸೂರ್ಯಕುಮಾರ್ ಅಲ್ಲಿನ ಮಾಹಿತಿ ಪಡೆದುಕೊಂಡರು. ಸೂರ್ಯಕುಮಾರ್ ,ಕರಾವಳಿಯ ಅಳಿಯ . ಅವರ ಪತ್ನಿ ಮಂಗಳೂರಿನವರು. ಈ ಸಂದರ್ಭ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭೇಟಿ ಸಂದರ್ಭ ಹೊಸ ಮಾರಿಗುಡಿಯ ಪ್ರಮುಖರು, ಊರ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!