Sunday, June 7, 2026
Homeಕ್ರೀಡೆಕಾರ್ಕಳ: ಬಾರಾಡಿ ಬೀಡು ಕಂಬಳದಲ್ಲಿ ದಾಖಲೆ ಬರೆದ ಹಕ್ಕೇರಿ ಸುರೇಶ್ ಶೆಟ್ಟಿ

ಕಾರ್ಕಳ: ಬಾರಾಡಿ ಬೀಡು ಕಂಬಳದಲ್ಲಿ ದಾಖಲೆ ಬರೆದ ಹಕ್ಕೇರಿ ಸುರೇಶ್ ಶೆಟ್ಟಿ

- Advertisement -
- Advertisement -

ಕಾರ್ಕಳ: ಕಾರ್ಕಳದ ಬಾರಾಡಿ ಬೀಡುವಿನಲ್ಲಿ 35ನೇ ವರ್ಷದ “ಸೂರ್ಯ-ಚಂದ್ರ” ಜೋಡುಕೆರೆ ಕಂಬಳ ಕೂಟ ಫೆ.5 ಮತ್ತು 6ರಂದು ನಡೆಯಿತು.


ಕಂಬಳ ಕೂಟದಲ್ಲಿ ಒಟ್ಟಾರೆ 162 ಜೊತೆ ಕೋಣಗಳು ಭಾಗವಹಿಸಿದ್ದು, ಕನೆಹಲಗೆ ಈ ಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 6 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 30 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 90 ಜೊತೆ ಕೋಣೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ.


ಕೊನೆಯ ಸುತ್ತಿನಲ್ಲಿ ಬಾರಾಡಿಬೀಡು ಕಂಬಳದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಮತ್ತು ಅನುಭವಿ ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ ಇವರು ಮೂರು ವಿಭಾಗದ ಕೋಣಗಳನ್ನು ಓಡಿಸಿ, ಮೂರು ವಿಭಾಗದಲ್ಲೂ ಕೊನೆಯ ಹಂತ ಪ್ರವೇಶಿಸಿ ಪ್ರಥಮ ಸ್ಥಾನವನ್ನು ಪಡೆದು ದಾಖಲೆ ಬರೆದಿದ್ದಾರೆ.

- Advertisement -

Latest News

error: Content is protected !!