Friday, April 26, 2024
Homeತಾಜಾ ಸುದ್ದಿಇಂದಿನಿಂದಲೇ ಪ್ರಾಥಮಿಕ ತರಗತಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಕು: ಸಚಿವ ಸುರೇಶ್ ಕುಮಾರ್

ಇಂದಿನಿಂದಲೇ ಪ್ರಾಥಮಿಕ ತರಗತಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಕು: ಸಚಿವ ಸುರೇಶ್ ಕುಮಾರ್

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಲ್ ಕೆ ಜಿ, ಯುಕೆಜಿ, ಪ್ರಾಥಮಿಕ ಹಂತದ ತರಗತಿಗಳಿಗೆ ಈ ಕೂಡಲೇ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಕ್ಲಾಸ್ ನಿಲ್ಲಿಸಬೇಕು. ಜೊತೆಗೆ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ಫೀಸ್ ತಗೊಳ್ಳೋದು ಕೂಡ ನಿಲ್ಲಿಸಬೇಕು. ಈ ಬಾರಿ ಫೀಸ್ ಹೆಚ್ಚು ಮಾಡಬಾರದು ಎಂಬುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ ಮಾಡಿದರು.

ಆನ್ ಲೈನ್ ಶಿಕ್ಷಣ ರದ್ದು ಕುರಿತಂತೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸರ್ವಶಿಕ್ಷಾ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಈ ರಜೆ ಇನ್ನೂ ಎಷ್ಟು ದಿನ ಮುಂದುವರೆಯುತ್ತೆ ಎನ್ನುವ ಭೀತಿಯಲ್ಲಿ ನಮ್ಮ ಮಕ್ಕಳನ್ನು ಕಲಿಕೆಯಲ್ಲಿ ಎಂಗೇಜ್ ಮಾಡುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಈ ಹಿನ್ನಲೆಯಲ್ಲಿ, ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಮೊದಲನೆಯದು ಎಲ್ ಕೆ ಜಿ ಮತ್ತು ಯುಕೆಜಿ, ಪ್ರಾಥಮಿಕ ಹಂತದ ತರಗತಿಗಳಿಗೆ ಈ ಕೂಡಲೇ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಕ್ಲಾಸ್ ನಿಲ್ಲಿಸಬೇಕು. ಜೊತೆಗೆ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ಫೀಸ್ ತಗೊಳ್ಳೋದು ಕೂಡ ನಿಲ್ಲಿಸಬೇಕು ಎಂದು ತಿಳಿಸಿದರು.

ಯಾರೂ ಕೂಡ ಈ ವರ್ಷದ ಫೀಸ್ ನಲ್ಲಿ ಮಾನವೀಯತೆಯ ದೃಷ್ಠಿಯಿಂದ ಹೆಚ್ಚುವರಿ ಮಾಡಬಾರದು. ಪೋಷಕರು ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಾಗಿ ಸೂಚಿಸಲಾಗಿದೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!